Latest

ಐಎಫ್ ಎಸ್ ಅಧಿಕಾರಿ ಶೂನಲ್ಲಿ ಅಡಗಿ ಕುಳಿತ ನಾಗಪ್ಪ; ಮಳೆಗಾಲದಲ್ಲಿ ಎಚ್ಚರದಿಂದಿರಿ ಎಂದು ವಿಡಿಯೋ ಹಂಚಿಕೊಂಡ ಅಧಿಕಾರಿ

ಪ್ರಗತಿವಾಹಿನಿ ಸುದ್ದಿ, ಭುಬನೇಶ್ವರ: ಮಳೆಗಾಲದಲ್ಲಿ ಉರಗಗಳು ಎಲ್ಲಿ ಬೇಕಾದಲ್ಲಿ ಆಶ್ರಯ ಪಡೆದಿರಬಹುದು, ಹೀಗಾಗಿ ಎಚ್ಚರದಿಂದಿರಿ ಎಂದು ಓಡಿಶಾದ ಐಎಫ್ ಎಸ್ ಅಧಿಕಾರಿಯೊಬ್ಬರು ಸಂದೇಶ ನೀಡಿದ್ದಾರೆ.

ಇದಕ್ಕೆ ಕಾರಣವೂ ಉಂಟು. ಸುಶಾಂತಾ ನಂದಾ ಅವರು ತೊಡುವ ಶೂನಲ್ಲೇ ನಾಗರಹಾವೊಂದು ಬೆಚ್ಚಗೆ ಅಡಗಿ ಕುಳಿತಿತ್ತು. ಇದನ್ನು ಶೂ ಧರಿಸುವ ಮುನ್ನವೇ ಗಮನಿಸಿದ ಸುಶಾಂತಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತ ವಿಡಿಯೊವೊಂದನ್ನು ಹರಿಬಿಟ್ಟಿದ್ದಾರೆ.

Home add -Advt

ಮಳೆಗಾಲದಲ್ಲಿ ಉರಗಗಳು ಎಲ್ಲೆಂದರಲ್ಲಿ ತಮಗೆ ಬೆಚ್ಚಗೆನಿಸುವ ಸ್ಥಳಗಳಲ್ಲಿ ಆಶ್ರಯ ಪಡೆದಿರುತ್ತವೆ. ಇದಕ್ಕೆ ನಾವು ಧರಿಸುವ ಶೂಸ್ ಕೂಡ ಹೊರತಾಗಿಲ್ಲ. ಅಚಾತುರ್ಯ ಅವಘಡಕ್ಕೆ ಕಾರಣವಾಗಲೂಬಹುದು.  ಹೀಗಾಗಿ ಪ್ರತಿಯೊಬ್ಬರೂ ಪ್ರತಿಕ್ಷಣವೂ ಎಚ್ಚರದಿಂದಿರುವುದು ಉತ್ತಮ ಎಂದು ಅವರು ಟ್ವೀಟ್ ಮಾಡಿದ್ದಾರೆ. 

ಉರಗಗಳನ್ನು ನಿರ್ವಹಿಸುವಲ್ಲಿ ಉತ್ತಮ ತರಬೇತಿ ಹೊಂದಿರುವ ಸುಶಾಂತಾ ನಂದಾ ಅದನ್ನು ಚಾಣಾಕ್ಷತನದಿಂದ ಹಿಡಿದು ರಕ್ಷಿಸಿದ್ದಾರೆ.

ಮೂತ್ರ ವಿಸರ್ಜನೆಗೆ ಹೋದಾಗಲೇ ದಾಳಿ; ಬಿಜೆಪಿ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ

 

Related Articles

Back to top button