Latest

‌‌‌ಮತ್ತೆ ಹಳಿಗಿಳಿದ ಕೊಯಮತ್ತೂರು- ಬೆಂಗಳೂರು ಉದಯ್ ಎಕ್ಸ್‌ಪ್ರೆಸ್

ಪ್ರಗತಿವಾಹಿನಿ: ಬೆಂಗಳೂರು; ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಬೆಂಗಳೂರು  ಮತ್ತು ಕೊಯಮತ್ತೂರು ನಡುವಿನ ಉದಯ್ ಎಕ್ಸ್‌ ಪ್ರೆಸ್‌ ರೈಲು  ಮತ್ತೆ ಹಳಿಗಿಳಿದಿದೆ.

ಕೊಯಮತ್ತೂರು ಮತ್ತು ಬೆಂಗಳೂರು ಉದಯ್ ಎಕ್ಸ್‌ಪ್ರೆಸ್ ಅನ್ನು ಮಾರ್ಚ್ 31 ರಿಂದ ಮತ್ತೆ ಪ್ರಾರಂಭವಾಗಲಿದೆ ಎಂದು ಭಾರತೀಯ ರೈಲ್ವೆಯ ದಕ್ಷಿಣ ವಲಯ ತಿಳಿಸಿದೆ.

ದಕ್ಷಿಣ ರೈಲ್ವೆ ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ:- “ರೈಲ್ವೆ ಮಂಡಳಿಯು ಅನುಮೋದಿಸಿದಂತೆ, ರೈಲು ಸಂಖ್ಯೆ. 22666 / 22665 ಕೊಯಮತ್ತೂರು ಜೆಎನ್-ಕೆಎಸ್ ಆರ್ ಬೆಂಗಳೂರು-ಕೊಯಮತ್ತೂರು ಬುಧವಾರ ಹೊರತುಪಡಿಸಿ ವಾರದ 6 ದಿನವೂ ಸಂಚರಿಸಲಿದೆ.

ರೈಲು 22666 ಕೊಯಮತ್ತೂರು ಜಂಕ್ಷನ್‌ನಿಂದ ಬೆಳಗ್ಗೆ 5.45ಕ್ಕೆ ಹೊರಟು ಮಧ್ಯಾಹ್ನ 12.40ಕ್ಕೆ ಬೆಂಗಳೂರು ತಲುಪಲಿದೆ.

ರೈಲು 22665 ಬೆಂಗಳೂರಿನಿಂದ ಮಧ್ಯಾಹ್ನ 2.15ಕ್ಕೆ ಹೊರಟು ರಾತ್ರಿ 9 ಗಂಟೆಗೆ ಕೊಯಮತ್ತೂರು ಜಂಕ್ಷನ್ ತಲುಪುತ್ತದೆ. ಕೊಯಮತ್ತೂರಿನಿಂದ ಬೆಂಗಳೂರು ನಡುವಿನ ಉದಯ್‌ ಎಕ್ಸ್‌ ಪ್ರೆಸ್‌ ಕೊಯಮತ್ತೂರು ಉತ್ತರ, ತಿರುಪ್ಪೂರ್, ಈರೋಡ್ ಜಂಕ್ಷನ್, ಸೇಲಂ ಜಂಕ್ಷನ್, ಕುಪ್ಪಂ, ಕೃಷ್ಣರಾಜಪುರಂ, ಕೆಎಸ್ ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಹಾದು ಹೋಗುತ್ತದೆ. ಮಾರ್ಗ ಮಧ್ಯ ಈ ಎಲ್ಲಾ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಸಂಚರಿಸಬಹುದಾಗಿದೆ.

ಅಶ್ನೀರ್ ಗ್ರೋವರ್ ರಾಜೀನಾಮೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button