ಪ್ರಗತಿವಾಹಿನಿ ಸುದ್ದಿ, ನೇಗಿನಹಾಳ: ಗ್ರಾಮದ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠದ ಪೀಠಾಧಿಪತಿಗಳಾಗಿದ್ದ ಬಸವ ಸಿದ್ಧಲಿಂಗ ಮಹಾಸ್ವಾಮಿಗಳ ಪುಣ್ಯಸ್ಮರಣೆ ಕಾರ್ಯಕ್ರಮ ಶುಕ್ರವಾರ ಜರುಗಲಿದೆ.
ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೆ ನಡೆದ ಎಲ್ಲ ಸಮಾವೇಶಗಳಲ್ಲಿ ಸ್ವಾಮಿಗಳು ಭಾಗಿಯಾಗಿದ್ದರು, ದಿಲ್ಲಿಯಲ್ಲಿ ನಡೆದ ಸಮಾವೇಶದಲ್ಲಿ ನೇಗಿನಹಾಳ ಗ್ರಾಮದಿಂದ ೮೦ಕ್ಕೂ ಅಧಿಕ ಯುವಕರೊಂದಿಗೆ ಭಾಗಿಯಾಗಿದ್ದರು. ಬಸವತತ್ವ ಸಮಾವೇಶದ ಮೂಲಕ ನೇರ ನಡೆ-ನುಡಿಗಳನ್ನಾಡುತ್ತ ವೈಚಾರಿಕ ಚಿಂತನೆಗಳು ನಾಡಿನಾದ್ಯಂತ ಬಿತ್ತಿದ್ದರು.
ಬೈಲಹೊಂಗಲ -ಸವದತ್ತಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಬಸವಕೇಂದ್ರ ಸ್ಥಾಪಿಸಲು ಪ್ರೇರಣೆ ನೀಡಿದ್ದರು. ಗ್ರಾಮದಲ್ಲಿ ಗೋಶಾಲೆ ನಿರ್ಮಿಸಿ ಕೃಷಿ ಕಾಯಕದೊಂದಿಗೆ ಗ್ರಾಮದ ಹಲವಾರು ಚಿಕ್ಕ ಹಿಡುವಳಿದಾರ ರೈತರ ಭೂಮಿಗೆ ನೀರಾವರಿ ಸೌಲಭ್ಯ ನೀಡಿ ತೋಟಗಾರಿಕೆ ಮಾಡಲು ಮಾರ್ಗದರ್ಶನ ಮಾಡುತ್ತಿದ್ದರು. ಗ್ರಾಮದ ನೂರಾರು ಬಡ ಯುವಕರಿಗೆ ಮಠದಲ್ಲಿ ಇರಿಸಿಕೊಂಡು ವಿದ್ಯಾಭ್ಯಾಸ ಮಾಡಲು ಅವಕಾಶ ಕಲ್ಪಿಸಿದ್ದರು.
ಶುಕ್ರವಾರ ಮುಂಜಾನೆ ೦೬:೦೦ ಗಂಟೆಗೆ ಗದ್ದುಗೆಗೆ ಪೂಜೆ, ಪೂಜ್ಯರಿಂದ ಶಿವಯೋಗ, ವಚನ ಭಜನೆ, ಸಂಗೀತ ಕಾರ್ಯಕ್ರಮ ನೇರೆವೇರುವುದು ಮುಂಜಾನೆ ೦೭:೦೦ ರಿಂದ ಸಂಜೆ ೦೬:೦೦ ಗಂಟೆಯವರೆಗೆ ನಿರಂತರ ವಚನ ಪಠಣ ನಡೆಯಲಿದ್ದು ಗದಗ-ಡಂಬಳ ತೋಂಟದಾರ್ಯ ಮಠದ ತೋಂಟದ ಡಾ. ಸಿದ್ಧರಾಮ ಮಹಾಸ್ವಾಮಿಗಳು, ಗರಗ ಮಡಿವಾಳೇಶ್ವರ ಮಠದ ಜಗದ್ಗುರು ಚನ್ನಬಸವ ಮಹಾಸ್ವಾಮಿಗಳು, ಮುಂಡರಗಿ -ಬೈಲೂರ ಮಠದ ನಿಜಗಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು, ಶಿವಮೊಗ್ಗ-ಚಿಕ್ಕಮಂಗಳೂರು ಬಸವತತ್ವ ಪೀಠದ ಡಾ. ಮರುಳಸಿದ್ಧ ಸ್ವಾಮೀಜಿ, ಧಾರವಾಡ ಮನಗುಂಡಿಯ ಬಸವಾನಂದ ಮಹಾಸ್ವಾಮಿಗಳು, ಬಸವಬೆಳವಿ ಶರಣಬಸವ ದೇವರು, ಬಸವಪ್ರಕಾಶ ಮಹಾಸ್ವಾಮಿಗಳು, ಬಸವಾನಂದ ಮಹಾಸ್ವಾಮಿಗಳು, ಧಾರವಾಡ ಅಕ್ಕಮಹಾದೇವಿ ಪೀಠದ ಮಾತೆ ಜ್ಞಾನೇಶ್ವರಿ, ಅತ್ತಿವೇರಿ ಬಸವೇಶ್ವರಿ ಮಾತಾಜಿ ಹಾಗೂ ನಾಡಿನ ನೂರಾರು ಮಠಾಧೀಶರು, ಜನಪ್ರತಿನಿಧಿಗಳು, ಆಗಮಿಸಲಿದ್ದಾರೆ.
ಪುಣ್ಯಸ್ಮರಣೆ ನಿಮಿತ್ತ ಬೆಳಗಾವಿ ಜಿಲ್ಲೆ ಸೇರಿದಂತೆ ಕರ್ನಾಟಕದಾದ್ಯಂತ ನೂರಾರು ಬಸವಪರ ಸಂಘಟನೆಗಳ ಸಾವಿರಾರು ಜನ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಬರುವ ಎಲ್ಲ ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಆನಂದ ಮಾಮನಿ ಆರೋಗ್ಯ ತಪಾಸಣೆಗೆ ಚೆನ್ನೈ ಆಸ್ಪತ್ರೆಗೆ ದಾಖಲು
https://pragati.taskdun.com/latest/ananda-mamani-admitted-to-chennai-hospital-for-health-care/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ