Latest

ಖ್ಯಾತ ಕಿರುತೆರೆ ನಟ ನಿಧನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಂಡ್ಯ ರವಿ ಎಂದೇ ಖ್ಯಾತರಾಗಿದ್ದ ಜನಪ್ರಿಯ ಕಿರುತೆರೆ ನಟ ಎಂ. ರವಿಪ್ರಸಾದ ( 43 ) ನಿಧನರಾಗಿದ್ದಾರೆ‌ .

ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಂಜೆ ಅವರು ಮೃತಪಟ್ಟಿದ್ದಾರೆ‌.

Home add -Advt

ಟಿ. ಎಸ್. ನಾಗಾಬರಣ ಅವರ ಮಹಾಮಾಯಿ ದಾರವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಅವರು ಹಲವಾರು ಧಾರಾವಾಹಿಗಳಲ್ಲಿ ಉತ್ತಮ ಅಭಿನಯದಿಂದ ಖ್ಯಾತಿ ಪಡೆದಿದ್ದರು. ಸಾಹಿತಿ ಎಚ್. ಎಸ್. ಮುದ್ದೇಗೌಡ ಅವರ ಪುತ್ರರಾದ ರವಿ ಪತ್ನಿ, ಪುತ್ರ, ತಂದೆ, ತಾಯಿ, ಇಬ್ಬರು ಸಹೋದರಿಯರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಆನಂದ ಮಾಮನಿ ಆರೋಗ್ಯ ತಪಾಸಣೆಗೆ ಚೆನ್ನೈ ಆಸ್ಪತ್ರೆಗೆ ದಾಖಲು

https://pragati.taskdun.com/latest/ananda-mamani-admitted-to-chennai-hospital-for-health-care/

Related Articles

Back to top button