ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜಿಲ್ಲೆಯ ಅಥಣಿ, ಕಾಗವಾಡ ಹಾಗೂ ಗೋಕಾಕ ಮತಕ್ಷೇತ್ರಗಳಿಗೆ ಡಿ.೫ರಂದು ನಡೆದ ಉಪ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಮೂರೂ ಮತಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.
ಅಥಣಿ ಮತಕ್ಷೇತ್ರ:
ಚಲಾವಣೆಗೊಂಡ ಮತಗಳು-೧,೬೫,೮೩೪
ತಿರಸ್ಕೃತ ಮತಗಳು-೩೮
ನೋಟಾ-೧೫೩೨
ಚಲಾವಣೆಗೊಂಡ ೧,೬೫,೮೩೪ ಮತಗಳ ಪೈಕಿ ೩೮ ಮತಗಳು ತಿರಸ್ಕೃತಗೊಂಡಿದ್ದು, ಒಟ್ಟು ೯೯೨೦೩ ಮತಗಳನ್ನು ಪಡೆದುಕೊಂಡ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಹೇಶ್ ಕುಮಠಳ್ಳಿ ಅವರು ವಿಜೇತರಾದರು.
ಕಾಗವಾಡ ಮತಕ್ಷೇತ್ರ:
ಚಲಾವಣೆಗೊಂಡ ಮತಗಳು-೧,೪೨,೦೬೭
ತಿರಸ್ಕೃತ ಮತಗಳು-೩೭
ನೋಟಾ-೧೨೩೮
೦೪-ಕಾಗವಾಡ ಮತಕ್ಷೇತ್ರದಲ್ಲಿ ಚಲಾವಣೆಗೊಂಡ ಒಟ್ಟು ೧,೪೨,೦೬೭ ಮತಗಳಲ್ಲಿ ೩೭ ಮತಗಳು ತಿರಸ್ಕೃತಗೊಂಡಿದ್ದು, ೭೬೯೫೨ ಮತಗಳನ್ನು ಗಳಿಸಿದ ಭಾರತೀಯ ಜನತಾ ಪಕ್ಷದ ಶ್ರೀಮಂತ ಪಾಟೀಲ ಅವರು ಗೆಲುವು ಸಾಧಿಸಿದ್ದಾರೆ.
ಗೋಕಾಕ ಮತಕ್ಷೇತ್ರ:
ಚಲಾವಣೆಗೊಂಡ ಮತಗಳು-೧,೭೮,೫೬೨
ತಿರಸ್ಕೃತ ಮತಗಳು-೦
ನೋಟಾ-೧೧೫೩
೦೯-ಗೋಕಾಕ ಮತಕ್ಷೇತ್ರದಲ್ಲಿ ಚಲಾವಣೆಗೊಂಡ ಒಟ್ಟು ೧,೭೮,೫೬೨ ಮತಗಳ ಪೈಕಿ ಯಾವುದೇ ಮತಗಳು ತಿರಸ್ಕೃತಗೊಂಡಿರುವುದಿಲ್ಲ. ಒಟ್ಟು ೮೭೪೫೦ ಮತಗಳನ್ನು ಪಡೆದುಕೊಂಡ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅವರು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದರು.
ಮೂರೂ ವಿಧಾನಸಭಾ ಮತಕ್ಷೇತ್ರಗಳ ಫಲಿತಾಂಶದ ವಿವರ ಈ ಕೆಳಗಿನಂತಿದೆ.
೧) ಅಥಣಿ ಕ್ಷೇತ್ರ :-
ಕ್ರ.ಸಂ ಅಭ್ಯರ್ಥಿಯ ಹೆಸರು ಪಕ್ಷ ಪಡೆದ ಮತಗಳು
೧. ಗಜಾನನ ಮಂಗಸೂಳಿ ಕಾಂಗ್ರೆಸ್ -೫೯,೨೧೪
೨. ಮಹೇಶ ಕುಮಠಳ್ಳಿ ಬಿ.ಜೆ.ಪಿ -೯೯,೨೦೩
೩. ವಿನಾಯಕ ಮಠಪತಿ ಕೆ.ಜೆ.ಪಿ -೪೦೦
೪. ಡಾ.ನಾಗನಾಥ ರಾವ್ ಯಾದಗೀರ ಉತ್ತಮ ಪ್ರಜಾಕೀಯ ಪಾರ್ಟಿ -೮೭೮
೫. ಇಮ್ರಾನ್ ಮುಖ್ತಾರ್‌ಅಹ್ಮದ್ ಪಟೇಲ್ ಪಕ್ಷೇತರ -೭೮೩
೬. ಶ್ರೀಶೈಲ್ ತುಕ್ಕಪ್ಪ ಹಳ್ಳದಮಳ ಪಕ್ಷೇತರ -೧೮೯೨
೭. ರಾಜು ಪರಶುರಾಮ್ ದವಾರಿ ಪಕ್ಷೇತರ -೧೫೭೭
೮. ರವಿ ಶಿವಪ್ಪ ಪಡಸಲಗಿ ಪಕ್ಷೇತರ -೩೧೭
೨) ಕಾಗವಾಡ ಕ್ಷೇತ್ರ :-
ಕ್ರ.ಸಂ ಅಭ್ಯರ್ಥಿಯ ಹೆಸರು ಪಕ್ಷ ಪಡೆದ ಮತಗಳು
೧. ಭರಮಗೌಡ ಎ. ಕಾಗೆ ಕಾಂಗ್ರೆಸ್ -೫೮,೩೯೫
೨. ಶ್ರೀಮಂತ ಪಾಟೀಲ್ ಬಿ.ಜೆ.ಪಿ -೭೬೯೫೨
೩. ಶ್ರೀಶೈ ಪರಸಪ್ಪ ತುಗಶೆಟ್ಟಿ ಜೆ.ಡಿ.ಎಸ್ -೨೪೪೮
೪. ಮುರುಗೆಪ್ಪ ನಿಂಗಪ್ಪ ದೇವರಡ್ಡಿ ಪಕ್ಷೇತರ -೩೦೪
೫. ದೀಪಕ ಜಗನ್ನಾಥ ಬುರಲಿ ಪಕ್ಷೇತರ -೪೩೭
೬. ಅರ್ಚನಾ ಗಣಪತಿ ಮೋಳೇಕರ ಪಕ್ಷೇತರ -೨೪೯
೭. ಸಂದೀಪ ಗೋಪಾಲ್ ಕಾಂಬ್ಳೆ ಪಕ್ಷೇತರ -೬೩೬
೮. ವಿವೇಕ ಜಯಂದ್ರ ಶೆಟ್ಟಿ ವಂಚಿತ ಬಹುಜನ ಅಘಾಡಿ -೧೦೯೯
೯. ಎ.ಸಚಿನ ಕುಮಾರ್ ಉತ್ತಮ ಪ್ರಜಾಕೀಯ ಪಾರ್ಟಿ -೨೭೨
೩) ಗೋಕಾಕ ಕ್ಷೇತ್ರ :-
ಕ್ರ.ಸಂ ಅಭ್ಯರ್ಥಿಯ ಹೆಸರು ಪಕ್ಷ ಪಡೆದ ಮತಗಳು
೧. ರಮೇಶ ಜಾರಕಿಹೊಳಿ ಬಿ.ಜೆ.ಪಿ -೮೭,೪೫೦
೨. ಲಖನ್ ಜಾರಕಿಹೊಳಿ ಕಾಂಗ್ರೆಸ್ -೫೮,೪೪೪
೩. ಅಶೋಕ ಪೂಜಾರಿ ಜೆ.ಡಿ.ಎಸ್ -೨೭೯೪೮
೪. ವೆಂಕಟೇಶ್ವರ ಮಹಾಸ್ವಾಮೀಜಿ ಹಿಂದೂಸ್ಥಾನ ಜನತಾ ಪಾರ್ಟಿ- ೬೪೭
೫. ಸತೀಶ ಅಶೋಕ ಪೂಜಾರಿ ಪಕ್ಷೇತರ- ೬೬೪
೬. ಸಂಜಯ್ ಈರಪ್ಪ ಕುರಬೇಟ ಪಕ್ಷೇತರ -೧೪೨೦
೭. ಪ್ರಕಾಶ ಬಾಗೋಜಿ ಪಕ್ಷೇತರ -೧೬೮
೮. ಗುರುಪುತ್ರ ಕೆಂಪಣ್ಣ ಕುಳ್ಳೂರ ಪಕ್ಷೇತರ -೧೧೪
೯. ರಾಮಪ್ಪ ಮಲ್ಲಪ್ಪ ಕುರಬೇಟ ಪಕ್ಷೇತರ -೨೬೩
೧೦. ಅಶೋಕ ಪಾಂಡಪ್ಪ ಹಣಜಿ ಪಕ್ಷೇತರ -೧೧೨
೧೧. ಸಂತೋಷ ನಂದೂರ ಪಕ್ಷೇತರ -೧೭೯
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ