Latest

ಶಾಲಾ ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಕಾಂಡೋಮ್, ಸಿಗರೇಟ್, ಲೈಟರ್…

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ವಿದ್ಯಾರ್ಥಿಗಳು ಶಾಲೆಗೆ ಮೊಬೈಲ್ ತರುತ್ತಿದ್ದಾರೆಂಬ ದೂರುಗಳ ಹಿನ್ನೆಲೆಯಲ್ಲಿ ಮಕ್ಕಳ ಬ್ಯಾಗ್ ತಪಾಸಣೆ ಮಾಡಲು ಹೋದ ಶಿಕ್ಷಕರು ಬ್ಯಾಗ್ ನಲ್ಲಿ ಸಿಕ್ಕ ವಸ್ತುಗಳನ್ನು ಕಂಡು ದಂಗಾಗಿ ಹೋಗಿದ್ದಾರೆ.

ರಾಜಧಾನಿಯ ಕೆಲವು ಶಾಲೆಗಳ ವಿದ್ಯಾರ್ಥಿಗಳ ಬ್ಯಾಗ್ ಗಳಲ್ಲಿ ಸಿಕ್ಕಿದ್ದು ಕಾಂಡೋಮ್, ಸಿಗರೇಟ್, ಲೈಟರ್, ಗರ್ಭನಿರೋಧಕ ಮಾತ್ರೆಗಳು.. ಇತ್ಯಾದಿ ಇತ್ಯಾದಿ..!

ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಮಂಡಳಿ ಆದೇಶದಂತೆ ಬ್ಯಾಗ್ ತಪಾಸಣೆ ಪ್ರಕ್ರಿಯೆ ನಡೆದಿತ್ತು. ಬಾಲಕರಷ್ಟೇ ಅಲ್ಲದೆ, ಬಾಲಕಿಯರೂ ಇದರಲ್ಲಿ ಹಿಂದೆ ಬಿದ್ದಿಲ್ಲ ಎಂದು ಹೇಳಲಾಗಿದೆ.

ಶಾಲೆಗಳಲ್ಲಿ ನೀಡುವ ನೈತಿಕ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಯಾವುದೇ ಪರಿಣಾಮ ಬೀರುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿದ್ದು ಶಾಲೆಗಳಿಗಿಂತ ಹೆಚ್ಚಾಗಿ ಪಾಲಕರ ನಿರ್ಲಕ್ಷ್ಯವೇ ಹೆಚ್ಚು ಬಿಂಬಿತವಾಗಿದೆ. ಆದಾಗ್ಯೂ ದುರ್ನೀತಿಯ ಹಾದಿ ತುಳಿಯುತ್ತಿರುವ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ನಡೆಸಿ ಪರಿವರ್ತನೆಗಾಗಿ ಪ್ರಯತ್ನಗಳು ನಡೆಯುತ್ತಿವೆ.

ನಾಳೆ ಭುವನಗಿರಿಯಲ್ಲಿ ಕನ್ನಡ ಜ್ಯೋತಿ ಹೊತ್ತ ‘ಕನ್ನಡ ರಥ’ಕ್ಕೆ ಚಾಲನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button