
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಚುನಾವಣೆ, ಉಪಚುನಾವಣೆ ಬರುತ್ತಿದ್ದಾಗ ಮಾತ್ರ ಕಾಂಗ್ರೆಸ್ ನಾಯಕರುಗಳ ಮೇಲೆ ಐಟಿ, ಇಡಿ ದಾಳಿಗಳಾಗುತ್ತವೆ. ರಾಜಕೀಯವಾಗಿ ಮಣಿಸಲು ಸಾಧ್ಯವಾಗದೆ ಅಧಿಕಾರವನ್ನು ದುರುಪಯೋಗ ಪಡಿಸಿ, ದ್ವೇಷದ ರಾಜಕಾರಣ ಮಾಡಲು ಹೊರಟಿದೆ ಬಿಜೆಪಿ. ನಮ್ಮ ಪಕ್ಷ ಮತ್ತು ನಮ್ಮ ನಾಯಕರು ಇದ್ಯಾವುದಕ್ಕೂ ಬಗ್ಗುವುದೂ ಇಲ್ಲ, ಜಗ್ಗುವುದೂ ಇಲ್ಲ ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ ಅವರ ಮನೆ ಮೇಲಿನ ಸಿಬಿಐ ದಾಳಿ ಎಲ್ಲರಿಗೂ ಗೊತ್ತಿರುವ ಹಾಗೆ ರಾಜಕೀಯ ಪ್ರೇರಿತವಾಗಿದ್ದು, ನಮ್ಮ ನಾಯಕರು ಸಮರ್ಥವಾಗಿ ಎಲ್ಲವನ್ನು ಎದುರಿಸುತ್ತಾರೆ. ಲಕ್ಷಾಂತರ ಕಾರ್ಯಕರ್ತರ ಪ್ರೋತ್ಸಾಹ, ಬೆಂಬಲ ಅವರ ಜೊತೆಗಿದ್ದು, ಬಿಜೆಪಿಯ ಕೀಳು ರಾಜಕೀಯ ಯಾವ ಕಾರಣಕ್ಕೂ ನಡೆಯುವುದಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ