
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ನಡೆಯುತ್ತಿರುವ ವಿಧಾನ ಸಭೆಯ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಗ್ರೆಸ್ ಗೆ ಶಿಗ್ಗಾವಿ ಚುನಾವಣೆ ತೆಲೆನೋವಾಗಿ ಪರಿಣಮಿಸಿತು. ಆದರೆ ಇದೀಗ ಬಂಡಾಯ ಶಮನವಾಗಿದೆ.
ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಸಹ ಈ ಬಾರಿ ಶಿಗ್ಗಾಂವಿ ಉಪಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ, ಕಾಂಗ್ರೆಸ್ ಹೈಕಮಾಂಡ್ ಪಠಾಣ್ ಅವರಿಗೆ ಟಿಕೇಟ್ ನೀಡಿತು. ಇದಿರಿಂದ ಅಸಮಾಧಾನಗೊಂಡಿದ್ದ ಖಾದ್ರೆ, ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು ಬಳಿಕ ಕಾಂಗ್ರೆಸ್ ನಾಯಕರ ಮನವೋಲಿಕೆ ಬಳಿಕ ನಾಮಪತ್ರ ಹಿಂಪಡೆಯುವದಾಗಿ ಘೋಷಣೆ ಮಾಡಿದರು.
ಮತ್ತೊಂದೆಡೆ ಅಪಡವಿಟ್ ಗೆ ಅಗತ್ಯ ಹಾಗೂ ಸಮರ್ಪಕ ವಿವರ ನೀಡದ ಹಿನ್ನಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಮಂಜುನಾಥ ಕುನ್ನೂರು ನಾಮಪತ್ರವನ್ನು ಚುನಾವಣಾಧಿಕಾರಿ ತಿರಸ್ಕೃತ ಮಾಡಿದ್ದಾರೆ. ಇದರಿಂದ ಕಾಂಗ್ರೆಸ್ ನಾಯಕರು ನಿಟ್ಟುಸಿರು ಬಿಟ್ಟಿದ್ದಾರೆ.
ಮತ್ತೊಂದೆಡೆ ತಮ್ಮ ಪುತ್ರನಿಗೆ ಟಿಕೆಟ್ ನೀಡುವಂತೆ ಮಂಜುನಾಥ ಕುನ್ನೂರು ಸಹ ಮನವಿ ಮಾಡಿದ್ದರು. ಆದ್ರೆ, ಟಿಕೆಟ್ ಸಿಗದಿದ್ದಕ್ಕೆ ಮಂಜುನಾಥ ಕುನ್ನೂರು ಸಹ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಇದೀಗ ಅವರ ನಾಮಪತ್ರ ರಿಜೆಕ್ಟ್ ಆಗಿದೆ.
ಈ ಮೂಲಕ ಕಾಂಗ್ರೆಸ್ ನಾಯಕರು ನಿ ರಾಳರಾಗಿದ್ದಾರೆ. ಒಂದು ವೇಳೆ ಖಾದ್ರಿ ಸಂಧಾನಕ್ಕೆ ಒಪ್ಪಿರಲಿಲ್ಲ ಅಂದರೆ ಅಲ್ಪಸಂಖ್ಯಾತ ಮತಗಳ ವಿಭಜನೆಯಾಗುತ್ತಿದ್ದವು. ಇನ್ನು ಮಂಜುನಾಥ್ ಸಹ ಕಾಂಗ್ರೆಸ್ನ ಅಲ್ಪ ಸ್ವಲ್ಪ ಮತಗಳನ್ನು ಪಡೆದುಕೊಂಡು ಮಗ್ಗಲು ಮುಳ್ಳಾಗುತ್ತಿದ್ದರು. ಆದರೆ, ಇದೀಗ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ಗೆ ಅಡ್ಡಿ ಆತಂಖಗಳು ನಿವಾರಣೆಯಾದಂತಾಗಿದೆ.
ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ್ ವಿವಿಧೆಡೆ ಪಾದಯಾತ್ರೆ ಮೂಲಕ ಮತಯಾಚನೆ ಮಾಡುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ