Kannada NewsLatest

ಮೋದಿ ಬೆನ್ನಿಗೆ ಅಂಜಲಿ ನಿಂಬಾಳ್ಕರ್!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-

ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳಕರ್ ಪ್ರಧಾನಿ ನರೇಂದ್ರ ಮೋದಿ ಯವರ ಬೆನ್ನಿಗೆ ನಿಂತಿದ್ದಾರೆ.

ದೇಶ ಮೊದಲು ಎನ್ನುವ ನಿಮ್ಮ ಧೋರಣೆಗೆ ನನ್ನ ಬೆಂಬಲವಿದೆ ಎಂದು ಅವರು ತಿಳಿಸಿದ್ದಾರೆ.

ಅಷ್ಟಕ್ಕೂ ಅಂಜಲಿ ಮೋದಿ ಬೆನ್ನಿಗೆ ನಿಂತಿದ್ದು ಜಮ್ಮು ಕಾಶ್ಮೀರ ವಿಷಯಕ್ಕೆ. ಜಮ್ಮು ಕಾಶ್ಮೀರದಲ್ಲಿ ಕಳೆದ 70 ವರ್ಷದಿಂದ ಇದ್ದ 370ನೇ ವಿಧಿ ರದ್ದುಪಡಿಸಿರುವುದಕ್ಕೆ ಅಂಜಲಿ ನಿಂಬಾಳಕರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Home add -Advt

ಅಲ್ಲಿ ನಿಮ್ಮ ಬೆಂಬಲಕ್ಕೆ ನಾನಿದ್ದೇನೆ ಎನ್ನುವ ಸಂದೇಶ ರವಾನಿಸಿದ್ದಾರೆ. ಈ ಕುರಿತು ಅಂಜಲಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಕೇಂದ್ರದಲ್ಲಿ ಮೋದಿ ಸರಕಾರದ ತೀರ್ಮಾನವನ್ನು ಪ್ರತಿಭಟಿಸಿದೆ. ರಾಜ್ಯ ಕಾಂಗ್ರೆಸ್ ಕೂಡ ಅದೇ ಹಾದಿ ಹಿಡಿದಿದೆ. ಆದರೆ ಕಾಂಗ್ರೆಸ್ ಶಾಸಕಿಯಾಗಿರುವ ಅಂಜಲಿ ನಿಂಬಾಳಕರ್ ಪಕ್ಷದ ನಿಲುವಿನ ವಿರುದ್ಧ ಧ್ವನಿ ಎತ್ತುವ ಧೈರ್ಯ ತೋರಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button