Kannada NewsKarnataka NewsLatest
*ಸಚಿವರಿಗೆ ಕಾಂಗ್ರೆಸ್ ಹೈಕಮಾಂಡ್ ಖಡಕ್ ಸೂಚನೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಕ್ಷದ ಚಟುವಟಿಕೆಗಳಿಂದ ಯಾರೂ ಅಂತರ ಕಾಯ್ದುಕೊಳ್ಳಬೇಡಿ ಎಂದು ಕರ್ನಾಟಕದ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ.
ವಾರದಲ್ಲಿ ಒಂದು ದಿನ ಒಬ್ಬ ಸಚಿವರು ಪಕ್ಷದ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಸಮಸ್ಯೆ ಆಲಿಸಿ ಎಂದು ಸೂಚಿಸಿದೆ.
ಪಕ್ಷ ಸಂಘಟನೆ ದೃಷ್ಟಿಂದ ಸಚಿವರು ಪಕ್ಷದ ಕಚೇರಿಗೆ ಭೇಟಿ ಕೊಡುವುದು ಅಗತ್ಯ ಎಂದದು ಹೇಳಿದೆ. ಹೈಕಮಾಂಡ್ ಸೂಚನೆ ಬೆನ್ನಲ್ಲೇ ಇಂಧನ ಸಚಿವ ಕೆ.ಜೆ ಜಾರ್ಜ್ ಇಂದು ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ್ದಾರೆ.



