ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದಾಗಿ ಅಪರಿಚಿತ ವ್ಯಕ್ತಿಯೋರ್ವ ಭದ್ರತಾ ಏಜೆನ್ಸಿಗೆ ಇ-ಮೇಲ್ ರವಾನಿಸಿದ್ದಾನೆ.
20 ನಗರಗಳಲ್ಲಿ ಆರ್ ಡಿ ಎಕ್ಸ್ ಬಾಂಬ್ ಇರಿಸಿದ್ದು, ನಾನು ಕೆಲ ಉಗ್ರರನ್ನು ಭೇಟಿಯಾಗಿದ್ದು, ಅವರು ಸಹಾಯ ಮಾಡುತ್ತಿದ್ದಾರೆ. ಬಹಳ ಸುಲಭವಾಗಿ ಬಾಮ್ಬ್ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು 20 ಸ್ಲೀಪರ್ ಸೆಲ್ ಗಳನ್ನು ಬಳಸಿಕೊಂಡು ಫೆ.28ರಿಂದ ಕಾರ್ಯಾಚರಣೆಗಿಳಿದಿದ್ದೇನೆ. ಪ್ರಧಾನಿ ಮೋದಿಯಿಂದ ನನ್ನ ಬದುಕು ಹಾಳಾಗಿದೆ. ಅವರ ಮೇಲೆ ಬಾಂಬ್ ಹಾಕುತ್ತೇನೆ. ಜನ ಹೇಗೂ ಸಾಯುತ್ತಿದ್ದಾರೆ. ನನ್ನ ಬಾಂಬ್ ನಿಂದಲೂ ಸಾಯುತ್ತಾರೆ. ಕೋಟ್ಯಂತರ ಜನರು ಸಾಯಲಿದ್ದಾರೆ….ಇನ್ ಶಾ ಅಲ್ಲಾಹ್ ಎಂದು ಇ-ಮೇಲ್ ನಲ್ಲಿ ಸಂದೇಶ ರವಾನಿಸಿದ್ದಾನೆ ಎಂದು ತಿಳಿದುಬಂದಿದೆ.
ಇ-ಮೇಲ್ ನ್ನು ಮುಂಬೈನ ರಾಷ್ಟ್ರೀಯ ತನಿಖಾ ದಳಕ್ಕೆ ಸೆಕ್ಯೂರಿಟಿ ಏಜೆನ್ಸಿ ನೀಡಿದ್ದು, ಬೆದರಿಕೆಯೊಡ್ಡುತ್ತಿರುವ ವ್ಯಕ್ತಿಯ ಪತ್ತೆಗಾಗಿ ಎನ್ ಐಎ ತನಿಖೆ ಆರಂಭವಿಸಿದೆ.
ಶಿವಕುಮಾರ ಶ್ರೀಗಳು ಆಧುನಿಕ ಬಸವಣ್ಣ; ಸಿದ್ಧಗಂಗಾ ಶ್ರೀ ಸ್ಮರಿಸಿದ ಕೇಂದ್ರ ಗೃಹ ಸಚಿವ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ