Belagavi NewsBelgaum News

*ಸ್ಮಾರ್ಟ್ ಸಿಟಿ ಪ್ರೊಜೆಕ್ಟ್-2: ಫ್ರಾನ್ಸ್ ಮತ್ತು ಜರ್ಮನಿ ತಂಡ ಬೆಳಗಾವಿಗೆ ಭೇಟಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಂದು ಬೆಳಗಾವಿ ಸ್ಮಾರ್ಟ್ ಸಿಟಿ ಅಡಿಯಲ್ಲಿ ಸಿಟಿಸ್ 2 ಪ್ರೊಜೆಕ್ಟಗಾಗಿ ಫ್ರಾನ್ಸ್ ಮತ್ತು ಜರ್ಮನಿ ಹಾಗೂ ಕೇಂದ್ರ ಸರ್ಕಾರದ ತಂಡ ಬೆಳಗಾವಿ ಮಹಾನಗರ ಪಾಲಿಕೆಗೆ ಭೇಟಿ ನೀಡಿದೆ.

ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಪಾಲಿಕೆಯ ಮಹಾಪೌರ ಹಾಗೂ ಉಪ ಮಹಾಪೌರರ  ಉಪಸ್ಥಿತಿಯಲ್ಲಿ ಸಭೆಯನ್ನು ಜರುಗಿಸಿಲಾಗಿದೆ. ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಬೆಳಗಾವಿ ಸ್ಮಾರ್ಟ್ ಸಿಟಿ ಎಂಡಿ, ಬೆಳಗಾವಿ ನಗರದ ಬಗ್ಗೆ ಹಾಗೂ ಘನ ತ್ಯಾಜ್ಯ ವಿಲೇವಾರಿ ಕುರಿತು ಸಭೆಯಲ್ಲಿ ವಿವರಿಸಿದರು.

Home add -Advt

ಸಭೆಯಲ್ಲಿ ಮಹಾಪೌರ ಮಂಗೇಶ್ ಪವಾರ್ ಮಾತನಾಡಿ ಪಾಲಿಕೆಯೂ ಸದ್ಯ ತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ಕಾರ್ಯಗಳ ಬಗ್ಗೆ ಹಾಗೂ ಪಾಲಿಕೆಯಲಿ ಆಗಬೇಕಾದ ಅಭಿವೃದ್ಧಿ ಕುರಿತು ವಿವರಣೆ ನೀಡಿದರು.

ಸಭೆಯ ನಂತರ ಪಾಲಿಕೆಯ ಘಣ ತ್ಯಾಜ್ಯ ವಿಲೇವಾರಿ ಘಟಕ ತುರುಮರಿಗೆ ಭೇಟಿ ನೀಡಲಾಯಿತು. ಕಳೆದ ಭೇಟಿ ನಂತರ ಪಾಲಿಕೆಯು ಎಂಟು ತಿಂಗಳಲ್ಲಿ ಮಾತ್ರ  ನಗರದಲ್ಲಿ ಹಾಗೂ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಾಕಷ್ಟು ಬದಲಾವಣೆಗಳನ್ನು   ಮಾಡಿರೋದನ್ನು ಕಂಡು ಪಾಲಿಕೆಯ ಆಯುಕ್ತರ ಹಾಗೂ ಸಿಬ್ಬಂದಿಗಳ ಕಾರ್ಯವೈಕರಿ ಬಗ್ಗೆ ಪ್ರoಶಿಸಿದರು. 

ನಂತರ ಪಾಲಿಕೆಯ ಸದಾಶಿವನಗರ ಗ್ಯಾರೇಜ್ ಗೆ ಹಾಗೂ ಒನ ತ್ಯಾಜ್ಯ ಸಂಗ್ರಹಣ ಕೇಂದ್ರಕ್ಕೆ ಭೇಟಿ ನೀಡಿದರು. ಇದಾದ ಬಳಿಕ ಫ್ರಾನ್ಸ್ ಮತ್ತು ಜರ್ಮನಿಯ ಅಧಿಕಾತಿಗಳ ತಂಡ ಪಾಲಿಕೆಯ ಖಾಸಬಾಗ್ ಬಯೋಗ್ಯಾಸ್ ಪ್ಲಾಂಟ್ ಹಾಗೂ ಡೇ ನಲ್ಮ್ ಸೆಂಟರಿಗೆ ಭೇಟಿ ನೀಡಿದರು.

Related Articles

Back to top button