CrimeKannada NewsKarnataka NewsLatest

*ಬೆಳಗಾವಿ ಪಾಲಿಕೆ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡ ಪಾಲಿಕೆ, ಮೆಟ್ರೋ ಸ್ಟೇಷನ್ ಗೂ ಬಾಂಬ್ ಬೆದರಿಕೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಮಹಾನಗರ ಪಾಲಿಕೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿರ್ಯ್ವ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿಗಳಿಗೂ ಸರಣಿ ಬಾಂಬ್ ಬೆದರಿಕೆ ಸಂದೇಶ ಬಂದಿದೆ.

ಇ-ಮೇಲ್‌ ಮೂಲಕ ಬಾಂಬ್ ಬೆದರಿಕೆ ಸಂದೇಶ ರವಾನೆಯಾಗಿದೆ. ಇದರಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಪಾಲಿಕೆ ಆಯುಕ್ತರ ಅಧಿಕೃತ ಇ-ಮೇಲ್‌ಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಸಂದೇಶಗಳು ತಲುಪಿದ್ದು, ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳಗಳು ತೀವ್ರ ತಪಾಸಣೆ ನಡೆಸಿವೆ.

ಹುಬ್ಬಳ್ಳಿಗೆ ಬಂದಿರುವ ಇ-ಮೇಲ್‌ನಲ್ಲಿ ಖಲಿಸ್ತಾನ್ ಉಗ್ರ ಸಂಘಟನೆಗಳ ಹೆಸರು, ಬೆಂಗಳೂರಿನ ನೈಸ್ (NICE) ಗ್ರೌಂಡ್ಸ್‌ನಲ್ಲಿ ನಡೆಯಲಿರುವ ಖ್ಯಾತ ಗಾಯಕ ದಿಲ್‌ಜಿತ್ ದೋಸಾಂಜ್ ಕಾರ್ಯಕ್ರಮ, ಬೆಂಗಳೂರು ಮೆಟ್ರೋ ಹಾಗೂ ನಟ ಅಮಿತಾಭ್ ಬಚ್ಚನ್ ಮನೆಗೆ ಬೆದರಿಕೆ ಹಾಕಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.

ಇಂದು ಬೆಳಿಗ್ಗೆ 11:35ಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ವೆಯಿಟ್ ಸ್ಮಿತ್ ಎಂಬ ಐಡಿಯಿಂದ ದೀರ್ಘವಾದ ಆಘಾತಕಾರಿ ಬೆದರಿಕೆ ಇ-ಮೇಲ್ ಬಂದಿದೆ. ಈ ಮೇಲ್‌ನಲ್ಲಿ ‘Khalistan National Army’ ಮತ್ತು ‘Babbar Khalsa (Parmar-Canada)’ ಹೆಸರುಗಳನ್ನು ಹಾಗೂ 1984ರ ಸಿಖ್ ನರಮೇಧದ ವಿಷಯವನ್ನು ಉಲ್ಲೇಖಿಸಿ ಬೆದರಿಕೆ ಹಾಕಲಾಗಿದೆ. ನವೆಂಬರ್ 29 ರಂದು ಬೆಂಗಳೂರಿನ ನೈಸ್ (NICE) ಸೆಂಟರ್ ಗ್ರೌಂಡ್ಸ್‌ನಲ್ಲಿ ನಡೆಯಲಿರುವ ಖ್ಯಾತ ಗಾಯಕ ದಿಲ್‌ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮದ ವೇದಿಕೆಯಲ್ಲಿ ಐಇಡಿ ಬಾಂಬ್ ಸ್ಫೋಟಿಸುವುದಾಗಿ ಹೆದರಿಸಲಾಗಿದೆ. ಸಾರ್ವಜನಿಕರು ಆ ದಿನ ನೈಸ್ ಗ್ರೌಂಡ್‌ಗೆ ಹೋಗದಂತೆ ಮತ್ತು ರಸ್ತೆಯಲ್ಲಿ ಐಫೋನ್ ಕಂಡುಬಂದರೆ ಮುಟ್ಟದಂತೆ ಆತಂಕಕಾರಿ ಸೂಚನೆ ನೀಡಲಾಗಿದೆ.

ನವೆಂಬರ್ 27 ರಂದು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಮನೆ ಬಳಿ ಹಾಗೂ ನವೆಂಬರ್ 29 ರಂದು ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಮಧ್ಯಾಹ್ನ 3:11 ರಿಂದ ರಾತ್ರಿ 11:11 ರ ಅವಧಿಯಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ.


Related Articles

Back to top button