ಸಂತಿಬಸ್ತವಾಡದಲ್ಲಿ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಾಣ – ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಘೋಷಣೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಂತಿ ಬಸ್ತವಾಡ ಗ್ರಾಮದ ವಿವಿಧ ಸಮಾಜ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸನ್ಮಾನಿಸಲಾಯಿತು.
ಭಾರೀ ಪ್ರಮಾಣದಲ್ಲಿ ಸೇರಿದ್ದ ಜನಸ್ತೋಮದ ಮಧ್ಯೆ ಹಬ್ಬದ ವಾತಾವರಣದಲ್ಲಿ ಸಚಿವರನ್ನು ಸ್ವಾಗತಿಸಿ, ಸನ್ಮಾನಿಸಲಾಯಿತು. ಕ್ಷೇತ್ರದ ಜನರ ಪ್ರೀತಿ, ಪ್ರೋತ್ಸಾಹ ನೋಡಿದರೆ ಯಾವ ಜನ್ಮದ ಪುಣ್ಯವೋ ತಿಳಿಯುತ್ತಿಲ್ಲ, ಶಾಸಕಿಯಾಗಿ ನಿಮ್ಮೆಲ್ಲರ ಸೇವೆ ಮಾಡುತ್ತಿದ್ದೇನೆ. ನೀವೆಲ್ಲರೂ ನನ್ನನ್ನು ಹರಸಿ, ಆಶೀರ್ವಾದ ಮಾಡಿದ್ದೀರಿ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಆಕಾಶಕ್ಕಿಂತಲೂ ದೊಡ್ಡದು ಎಂದು ಹೆಬ್ಬಾಳಕರ್ ಭಾವುಕರಾಗಿ ನುಡಿದರು.
ಬರುವ ದಿನಗಳಲ್ಲಿ ಈ ಗ್ರಾಮದಲ್ಲಿ ಸಾರ್ವಜನಿಕರಿಗಾಗಿ ಒಂದು ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಾಣ ಮಾಡಿ, ಕಲ್ಯಾಣ ಮಂಟಪದ ಆವರಣದಲ್ಲಿ ಫೇವರ್ಸ್ ಅಳವಡಿಕೆ, 2 ಹೈಮಾಸ್ಟ್ ವಿದ್ಯುತ್ ದೀಪದ ದೀಪಗಳನ್ನು ನಿರ್ಮಾಣ ಮಾಡಿಕೊಡುತ್ತೇನೆ ಎಂದು ಸಚಿವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಯುವರಾಜ ಕದಂ, ಸೇಂಟ್ ಜೋಸೆಫ್ ಹೈಸ್ಕೂಲಿನ ಹೆಡ್ ಮಾಸ್ಟರ್ ಸಿಸ್ಟರ್ ಲವೀನಾ, ದ್ಯಾಮಣ್ಣ ನಾಯಕ, ಬಸು ಬೀರಮುತ್ತಿ, ರಾಮಲಿಂಗ ಕರ್ಲೇಕರ್, ಮೆಹಬೂಬ್ ತಹಶಿಲ್ದಾರ, ಆಶ್ಪಕ್ ತಹಶಿಲ್ದಾರ, ಅಜಯ ಚಿನಕುಪ್ಪಿ, ರೇಣುಕಾ ಖಾನಾಪೂರೆ, ನಿಶಾ ಜಂಗಳಿ, ಸಾತೇರಿ ಗುರವ್, ಸಕ್ಕುಬಾಯಿ ಯಡಗೆ, ರಘುನಾಥ್ ಖಂಡೇಕರ್, ಅಲ್ತಾಫ್ ಸುಬೇದಾರ್, ಮಲ್ಲಿಕಾರ್ಜುನ ರಾಶಿಂಗೆ, ನಾಗೇಂದ್ರ ಬುಡ್ರಿ, ನಾಗಪ್ಪ ಇಂಚಲ, ಅಪ್ಪಯ್ಯ ದರವೇಶಿ, ಬಸವರಾಜ ಬುಡ್ರಿ, ವಿವಿಧ ಸಂಘಟನೆಗಳು ಹಾಗೂ ಗ್ರಾಮದ ಮಹಿಳೆಯರು, ಮಕ್ಕಳು ಉಪಸ್ಥಿತರಿದ್ದರು.
ಮುಸ್ಲಿಂ ಸಮಾಜದಿಂದ ಸನ್ಮಾನ ಇದಾದ ನಂತರ
ಸಂತಿಬಸ್ತವಾಡ ಗ್ರಾಮದ ಮುಸ್ಲಿಂ ಸಮಾಜದವರು ಸಹ ಸಚಿವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಯುವರಾಜ ಕದಂ, ಜಮಾತ್ ಅಧ್ಯಕ್ಷರಾದ ಮೊಹಮ್ಮದ್ ನಿಸಾರ್ ತಹಶಿಲ್ದಾರ, ಉಪಾಧ್ಯಕ್ಷ ರಮ್ಜಾನ್ ಚೌಧರಿ, ಕಾರ್ಯದರ್ಶಿ ಅಬ್ದುಲ್ ಜಬ್ಬರ್ ತಹಶಿಲ್ದಾರ, ಆಶ್ಪಕ್ ಬೈಯಾ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ