Kannada NewsKarnataka News

ಬೆಳಗಾವಿ ​ಗ್ರಾಮೀಣ ಕ್ಷೇತ್ರದಲ್ಲಿ 103 ದೇವಸ್ಥಾನಗಳ ನಿರ್ಮಾಣ, ಜೀರ್ಣೋದ್ಱಾರ​ – ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ:  ಬೆಳಗಾವಿ ಗ್ರಾಮೀಣ ಕ್ಷೇತ್ರದ ರಣಕುಂಡೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಮಾರುತಿ ಹಾಗೂ ಶ್ರೀ ಬ್ರಹ್ಮಲಿಂಗ ಮಂದಿರಗಳನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಶುಕ್ರವಾರ ಉದ್ಘಾಟಿಸಿ, ಕಳಸಾರೋಹಣ ಕಾರ್ಯಕ್ರಮಕ್ಕೆ  ಚಾಲನೆ ನೀಡಿದರು.
ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ದೇವಸ್ಥಾನಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು,​ ಕಳೆದ ನಾಲ್ಕೂವರೆ ವರ್ಷದಲ್ಲಿ ಕ್ಷೇತ್ರದ 103 ದೇವಸ್ಥಾನಗಳನ್ನು ನಿರ್ಮಾಣ ಇಲ್ಲವೆ, ಜೀರ್ಣೋದ್ಧಾರ ಮಾಡಲಾಗಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
 
ಶಾಸಕಿಯಾಗಿ ​ಆಯ್ಕೆಯಾದಾಗಿನಿಂದ​ ನೀವೆಲ್ಲರೂ ಪ್ರೀತಿ, ಪ್ರೋತ್ಸಾಹ​ ನೀಡುತ್ತಿದ್ದೀರಿ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ ​ಮುಂದಿನ ದಿನಗಳಲ್ಲೂ ಹೀಗೆಯೇ ಇರಲಿ. ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಮಾಡಬೇಕೆನ್ನುವ ನನ್ನ ಉದ್ದೇಶಕ್ಕೆ ತಾವೆಲ್ಲರೂ ಕೈಜೋಡಿಸುತ್ತೀರೆನ್ನುವ ವಿಶ್ವಾಸವಿದೆ ಎಂದು ಅವರು ಹೇಳಿದರು. 
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹಿರೇಬಾಗೇವಾಡಿ ಸುಕ್ಷೇತ್ರ ಬಡೇಕೊಳ್ಳಿಮಠದ ಶ್ರೀ ನಾಗೇಂದ್ರ ಸ್ವಾಮಿಗಳು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಭರಮಣ್ಣ ಪಾಟೀಲ, ಶಂಕರ ಪಾಟೀಲ, ಮಹಾದೇವ ಪಾಟೀಲ, ಯುವ ಕಾಂಗ್ರೆಸ್ ಮುಖಂಡ ​ಮೃಣಾಲ ಹೆಬ್ಬಾಳಕರ್, ನಿಂಗಪ್ಪ ಪಾಟೀಲ, ‌ವಸಂತ ತಹಶಿಲ್ದಾರ, ನರೇಂದ್ರ ಎಸ್, ವಿನೋದ ಮುತ್ನಾಳ, ನೂರಸಾಬ್ ತಹಶಿಲ್ದಾರ, ಪ್ರಭಾಕರ್ ಪಾಟೀಲ, ವಿಠ್ಠಲ ಪಾಟೀಲ, ಮಂಗೇಶ ಪಾಟೀಲ, ಸುರೇಶ ಕೋಲಕಾರ, ಪ್ರಕಾಶ ಪಾಟೀಲ, ಪರ​ಶು​ರಾಮ ಪಾಟೀಲ, ನಾಗೇಂದ್ರ ಪಾಟೀಲ ಹಾಗೂ ದೇವಸ್ಥಾನ ಟ್ರಸ್ಟ್ ಕಮೀಟಿಯವರು  ಉಪಸ್ಥಿತರಿದ್ದರು.
https://pragati.taskdun.com/road-work-started-in-karle-village-of-belagavi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button