Karnataka News

*ಕಲುಷಿತ ನೀರು ಸೇವನೆ: ಓರ್ವ ಸಾವು, 12 ಜನರು ತೀವ್ರ ಅಸ್ವಸ್ಥ*

ಪ್ರಗತಿವಾಹಿನಿ ಸುದ್ದಿ: ಕಲುಷಿತ ನೀರು ಸೇವಿಸಿ ಓರ್ವ ಸಾವನ್ನಪ್ಪಿದ್ದು, 12 ಜನರು ತೀವ್ರ ಅಸ್ವಸ್ಥಗೊಂಡಿರುವ ಘಟನೆ ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಬೆಟ್ಟಹಳ್ಳಿಯಲ್ಲಿ ನಡೆದಿದೆ

ಗೋವಿಂದೇಗೌಡ (65) ಮೃತರು. ಬೆಟ್ಟಹಳ್ಳಿ ಗ್ರಾಮಕ್ಕೆ ಟ್ಯಾಂಕರ್ ನಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿತ್ತು. ನೀರು ಕುಡಿದ ಬಳಿಕ ಗ್ರಾಮಸ್ಥರಲ್ಲಿ ವಾಂತಿ-ಬೇಧಿ ಶುರುವಾಗಿದೆ.

Home add -Advt

ಅಸ್ವಸ್ಥರನ್ನು ಸಾಲಿಗ್ರಾಮ ಆರೋಗ್ಯ ಕೇಂದ್ರಕ್ಕೀ ದಾಖಲಿಸಲಾಗಿತ್ತು. ತೀವ್ರ ಅಸ್ವಸ್ಥಗೊಂಡಿದ್ದ ಗೋವಿಂದೇಗೌಡ ಎಂಬುವವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಗೋವಿಂದೇಗೌಡ ಸಾವನ್ನಪ್ಪಿದ್ದಾರೆ.

ಬೆಟ್ಟಹಳ್ಳಿ ಗ್ರಾಮಕ್ಕೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Related Articles

Back to top button