
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮಕ್ಕಳು ಮತ್ತು ವಿದ್ಯಾರ್ಥಿಗಳ ಸರ್ವಾಂಗೀಣ ಬಳವಣಿಗೆಗೆ ವ್ಯಾಯಾಮ ಮತ್ತು ಕ್ರೀಡಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮವನ್ನು ಆರಂಭಿಸಲಾಗಿದ್ದು, ಹಂತ ಹಂತವಾಗಿ ಎಲ್ಲ ಗ್ರಾಮಗಳೂ ಇದರ ಪ್ರಯೋಜನ ಪಡೆಯಲಿವೆ ಎಂದು ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದ್ದು, ಕಬಡ್ಡಿ ಗ್ರಾಮೀಣ ಭಾಗಗಳಲ್ಲಿ ಅತ್ಯಂತ ಸಾಮಾನ್ಯ ಮತ್ತು ವ್ಯಾಪಕವಾಗಿ ಆಡಲಾಗುವ ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಒಂದಾಗಿದೆ. ಯುವಕರು, ಮಕ್ಕಳು ಬಯಲಲ್ಲಿ ಆಟ ಆಡುವುದನ್ನು ನೋಡುವುದೇ ಇಂದಿನ ದಿನಗಳಲ್ಲಿ ಅಪರೂಪವಾಗಿದೆ. ಯುವಕರನ್ನು ಪ್ರೋತ್ಸಾಹಿಸಲು ಎಲ್ಲ ರೀತಿಯ ಕ್ರೀಡಾ ಚಟುವಟಿಕೆಗಳಿಗೂ ಸಹಕಾರ ನೀಡಲಾಗುತ್ತಿದೆ ಎಂದು ಹೆಬ್ಬಾಳಕರ್ ಹೇಳಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಶಂಕರ ಗೋವೆಕರ್, ವಿನಾಯಕ ಪಾಟೀಲ, ಗಣಪತ್ ಸಾಂಬ್ರೇಕರ್, ಸ್ನೇಹಕ್ ಲೋಹಾರ, ರಂಜನಾ ಬಾಸ್ಕಳ, ಜಯವಂತ ಪಾಟೀಲ, ಅಮೃತ್ ಕೇಮನಾಳ್ಕರ್, ಪ್ರಕಾಶ ಸೆಳ್ಕೆ, ವಿನಾಯಕ ಪಾಟೀಲ, ಸಾಗರ ಗೋವೆಕರ್, ವಿಜಯ ಪಾಟೀಕ, ರವಳು ಸೆಳ್ಕೆ ಮುಂತಾದವರು ಉಪಸ್ಥಿತರಿದ್ದರು.
https://pragati.taskdun.com/gratitude-for-development-villagers-came-to-mlas-house-and-honored/