ತುರ್ತು ಆರೋಗ್ಯ ಸೇವೆಗೆ ಸ್ಮಾರ್ಟಸಿಟಿ ಲಿಮಿಟೆಡ್‌ನಿಂದ ಕೊಡುಗೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-
ಬೆಳಗಾವಿ ಸಾರ್ಟಸಿಟಿಯು ಬಿಮ್ಸ್‌ನ ಆರೋಗ್ಯ ಸೇವೆಯ ಉನ್ನತೀಕರಣಕ್ಕಾಗಿ ರೂ.೩ ಕೋಟಿ ರೂ. ಮೀಸಲಿಟ್ಟಿದೆ. ಈ ವೆಚ್ಚವನ್ನು ಬೆಳಗಾವಿ ವೈದ್ಯಕೀಯ ಸಂಸ್ಥೆಯ ಟ್ರೊಮಾ ಸೆಂಟರ್ ಅಭಿವೃದ್ಧಿಗೆ ನಿಗದಿಪಡಿಸಿದೆ. ಈ ಟ್ರೊಮಾ ಸೆಂಟರ್ ಬೆಳಗಾವಿ ಮತ್ತು ಸುತ್ತಮುತ್ತಲಿನ ಪ್ರದೇಶದ ಜನರಿಗೆ ತುರ್ತು ಮತ್ತು ಕ್ಲಿಷ್ಟಕರ ಆರೋಗ್ಯ ಸೇವೆಯನ್ನು ನೀಡುತ್ತದೆ.
ಬೆಳಗಾವಿ ವೈದ್ಯಕೀಯ ಸಂಸ್ಥೆಯ ಅವಶ್ಯಕತೆಗೆ ಅನುಗುಣವಾಗಿ ಬೆಳಗಾವಿ ಸ್ಮಾರ್ಟಸಿಟಿಯು ಕೆಲವು ಅವಶ್ಯಕ ಉಪಕರಣಗಳಾದ ಡಿಜಿಟಲ್ ಎಕ್ಸರೇ, ಐಸಿಯು ವೆಂಟಿಲೇಟರ, ಡಿಪಿಬ್ರಿಲೇಟರ್, ಮಲ್ಟಿಪ್ಯಾರಾ ಮಾನಿಟರ್ ಹಾಗೂ ಸುಸಜ್ಜಿತ ವಿಶಿಷ್ಟ ತಾಂತ್ರಿಕ ಉಪಕರಣಗಳನ್ನೊಳಗೊಂಡ ಅನುಕೂಲತೆಯುಳ್ಳ ಒಂದು ಆಂಬ್ಯುಲೆನ್ಸನ್ನು ಈಗಾಗಲೆ ಮೊದಲನೆ ಹಂತದಲ್ಲಿ ನೀಡಿದೆ.
ಈ ಉಪಕರಣಗಳಿಂದ ಬಿಮ್ಸ್ ವೈದ್ಯಕೀಯ ಸಂಸ್ಥೆಗೆ ಬಹಳಷ್ಟು ನೆರವಾಗಿದ್ದು ಜೀವ ಉಳಿಸುವ ಪ್ರಕ್ರಿಯೆಗೆ ಬೆಳಗಾವಿ ಸ್ಮಾರ್ಟಸಿಟಿ ವಿಶಿಷ್ಟವಾದ ಕೊಡುಗೆ ನೀಡಿದೆ. ಇದರಿಂದ ತುರ್ತು ಮತ್ತು ಕ್ಲಿಷ್ಟ ಆರೋಗ್ಯ ಸೇವೆಗಳನ್ನು ನೀಡಲು ಅನುಕೂಲವಾಗಿದೆ ಎಂದು ಬೆಳಗಾವಿ ವೈದ್ಯಕೀಯ ಸಂಸ್ಥೆಯ ನಿರ್ದೇಶಕರಾದ ಡಾ. ಎಸ್. ಟಿ. ಕಳಸದ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಪ್ರಪ್ರಥಮವಾಗಿ ಸುಸಜ್ಜಿತವಾದ ಆಂಬ್ಯುಲೆನ್ಸ್ ಹೊಂದಿದ ಕೀರ್ತಿ ಸಲ್ಲುತ್ತದೆ. ಏಕೆಂದರೆ ಈ ಆಂಬ್ಯುಲೆನ್ಸ್ ಸಾಮಾನ್ಯ ಆಂಬ್ಯುಲೆನ್ಸ್ಗೆ ಹೋಲಿಸಿದಾಗ ಸಾಮಾನ್ಯ ಅಂಬುಲೆನ್ಸನಲ್ಲಿ ಕೇವಲ ಆಕ್ಸಿಜನ್ ಸಿಲೆಂಡರ್, I V Fluid ಮಾತ್ರ ಇದ್ದರೆ, ಈ ಸುಸಜ್ಜಿತ ಅಂಬುಲೆನ್ಸನಲ್ಲಿ ಅಟೋಲೋಡರ್, ಸ್ಕೂಪ್ ಸ್ಟ್ರೇಚರ್, ಸ್ಪೈನ್ ಬೋರ್ಡ್, I V Fluid, ಎಮರ್ಜೆನ್ಸಿಕಿಟ್, ಅದರಲ್ಲಿ ಬಿ.ಪಿ.ಆಪರೇಟರ್, ಥರ್ಮಾಮೀಟರ್, ಆಂಬೂ ಬ್ಯಾಗ್, ಟ್ರಾನ್ಸಪೋರ್ಟ್ ವೆಂಟಿಲೇಟರ್, ಡಿಪೆಬ್ರಿಲೆಟರ್ cum ಮಾನಿಟರ್ cum AED ಪೇಸರ್, ಸಕ್ಸನ್‌ಆಪರೇಟರ್, ಇಂಪ್ಯೂಜಲ್ ಪಂಪ್,(೧.೦೦೫), ೨ ಆಕ್ಸಿಜನ್ ಸಿಲೆಂಡರ್, ಹೆಡ್ ಇಂಮೊಬಲೈಜರ್, ವ್ಹೀಲ್ ಸ್ಪ್ಯಾನರ್, ಜಾಕ್, ಮೊದಲಾದ ಉಪಕರಣಗಳನ್ನು ಹೊಂದಿದೆ. ಹೀಗಾಗಿ ಇದೊಂದು ಅತ್ತ್ಯುತ್ತಮ ಆರೋಗ್ಯ ಸೇವೆಯ ಕೊಡುಗೆಯಾಗಿದೆಯೆಂದು ತಿಳಿಸಿದ್ದಾರೆ.
ಬೆಳಗಾವಿ ಸ್ಮಾರ್ಟಸಿಟಿ ಲಿಮಿಟೆಡ್ ವತಿಯಿಂದ, ಎರಡನೇ ಹಂತದಲ್ಲಿ ಮಾಡ್ಯುಲರ್ ಶಸ್ತ್ರಚಿಕಿತ್ಸಾ ಕೊಠಡಿ ಮತ್ತು ಐಸಿಯು ಕಾಟ್‌ಗಳನ್ನು ನೀಡಲು ಉದ್ದೇಶಿಸಿದೆ. ಎರಡನೇ ಹಂತದ ಕಾರ್ಯಗಳು ಇನ್ನು ೩ ತಿಂಗಳಲ್ಲಿ ಪೂರ್ಣಗೊಳಿಸುತ್ತೇವೆಯೆಂದು ವ್ಯವಸ್ಥಾಪಕ ನಿರ್ದೇಶಕಿ ಶಿರೀನ್ ನದಾಫ್ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ