ಕೊರೋನಾ: ಪುಣೆ ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದ ಬೆಂಗಳೂರು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ದೇಶದಲ್ಲೇ ಕೊರೋನಾ ಸಕ್ರೀಯ ಪ್ರಕರಣಗಳಲ್ಲಿ ಬೆಂಗಳೂರು ಈಗ ನಂಬರ್ 1 ಸ್ಥಾನಕ್ಕೇರಿದೆ.

ಬೆಂಗಳೂರಿನಲ್ಲಿ ನಿತ್ಯ 15 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ದೃಢಪಡುತ್ತಿದ್ದು, 1.50 ಲಕ್ಷ ಸಕ್ರೀಯ ಪ್ರಕರಣಗಳಿವೆ. ಇದರಿಂದಾಗಿ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನಕ್ಕೇರಿದೆ.

ಪುಣೆಯಲ್ಲಿ 1.16 ಲಕ್ಷ ಸಕ್ರೀಯ ಪ್ರಕರಣಗಳಿದ್ದರೆ, ದೆಹಲಿಯಲ್ಲಿ 92 ಸಾವಿರ ಹಾಗೂ ಮುಂಬೈಯಲ್ಲಿ 82 ಸಾವಿರ ಸಕ್ರೀಯ ಪ್ರಕರಣಗಳಿವೆ.

ಬರುವ ಮೇ 10ರ ಹೊತ್ತಿಗೆ ಬೆಂಗಳೂರು ಸೇರಿದಂತೆ ಭಾರತದಲ್ಲಿ ಕೊರೋನಾ ಇನ್ನಷ್ಟು ಗಂಭೀರತೆ ಪಡೆಯಲಿದೆ ಎಂದು ಅಮೇರಿಕಾದ ಸಮೀಕ್ಷೆಯೊಂದು ಹೇಳಿದೆ.

Home add -Advt

ಜನರು ಜಾಗ್ರತರಾದರಷ್ಟೇ ಕೊರೆನಾ ನಿಯಂತ್ರಣ ಸಾಧ್ಯ. ಸರಕಾರದ ಕ್ರಮಗಳಿಂದ ಮಾತ್ರ ತಡೆ ಸಾಧ್ಯವಿಲ್ಲ.

ಸೋಮವಾರದಿಂದ ಇನ್ನಷ್ಟು ಕಠಿಣ ನಿರ್ಧಾರ?

 

Related Articles

Back to top button