ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಬುಧವಾರ ಕೊರೋನಾ 4 ಸಾವಿರ ದಾಟಿದ್ದು, ಬೆಂಗಳೂರಿನಲ್ಲಿ ಒಂದೇ ದಿನ 3605 ಜನರಿಗೆ ಪಾಸಿಟಿವ್ ಬಂದಿದೆ.
ರಾಜ್ಯದಲ್ಲಿ ಒಟ್ಟೂ 4246 ಜನರಿಗೆ ಬುಧವಾರ ಕೊರೋನಾ ದೃಢಪಟ್ಟಿದ್ದು, ಶೇ.85ಕ್ಕಿಂತ ಹೆಚ್ಚು ಬೆಂಗಳೂರಿನಲ್ಲಿ ಪತ್ತೆಯಾಗಿದೆ.
ಬೆಳಗಾವಿಯಲ್ಲಿ 31, ಬಳ್ಳಾರಿಯಲ್ಲಿ 34, ದಕ್ಷಿಣ ಕನ್ನಡದಲ್ಲಿ 111, ಉಡುಪಿಯಲ್ಲಿ 88, ಉತ್ತರ ಕನ್ನಡದಲ್ಲಿ 17, ತುಮಕೂರಿನಲ್ಲಿ 43, ಧಾರವಾಡದಲ್ಲಿ 26 ಜನರಲ್ಲಿ ಕೊರೋನಾ ಪತ್ತೆಯಾಗಿದೆ.
ಕೊರೋನಾದಿಂದಾಗಿ ಬೆಂಗಳೂರಿನಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ