Kannada NewsKarnataka NewsLatest

16ರಂದು ನಿರ್ಧಾರ ಕೈಗೊಳ್ತಾರಂತೆ ಅಶೋಕ ಪೂಜಾರಿ

ಪ್ರಗತಿವಾಹಿನಿ ಸುದ್ದಿ, ಗೋಕಾಕ –ರಾಜಕೀಯ ನಿರ್ಧಾರ ತೆಗೆದುಕೊಳ್ಳುವಲ್ಲಿ ತೀವ್ರ ಗೊಂದಲದಲ್ಲಿರುವ ಗೋಕಾಕದ ಅಶೋಕ ಪೂಜಾರಿ ನ.16ರಂದು ಮಹತ್ವದ ಸಭೆ ಕರೆದಿದ್ದಾರೆ.

ಅಂದು ಮುಂಜಾನೆ ೧೧  ಗಂಟೆಗೆ ಗೋಕಾಕದ ’ಜ್ಞಾನ ಮಂದಿರ ’ಆಧ್ಯಾತ್ಮ ಕೇಂದ್ರದ ಸಭಾಂಗಣದಲ್ಲಿ  ನನ್ನ ರಾಜಕೀಯ ಮತ್ತು ಸಾಮಾಜಿಕ ಹೋರಾಟಗಳ ಮಾರ್ಗದರ್ಶಕರು, ಹಿತೈಷಿಗಳು, ಮುಖಂಡರು ಮತ್ತು ಕಾರ್ಯಕರ್ತರುಗಳ ಮಹತ್ವದ ಸಭೆಯನ್ನು ಕರೆಯಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ ೫ ರಂದು ಗೋಕಾಕ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಈ ಸಂದರ್ಭದಲ್ಲಿ ಅನೇಕ ಊಹಾಪೋಹಗಳು ಜನತೆಯನ್ನು ಗೊಂದಲಕ್ಕೆ ಈಡು ಮಾಡುತ್ತಿವೆ. ಆದರೆ ಗೋಕಾಕ ತಾಲೂಕಿನ ಜನಸಮುದಾಯ ಇಲ್ಲಿಯ ಸರ್ವಾಧಿಕಾರಿ ಮನೋಭಾವನೆಯ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗೆ ನಮ್ಮ ಸುಧೀರ್ಘ ಹೋರಾಟಕ್ಕೆ ಮನಃಪೂರ್ವಕ ಸಹಾಯ, ಸಹಕಾರ ಮತ್ತು ಬೆಂಬಲ ನೀಡುತ್ತ ಬಂದಿದ್ದಾರೆ.

Home add -Advt

ಇಂತಹ ಸಂದರ್ಭದಲ್ಲಿ ಇಂದಿನ ರಾಜಕೀಯ ಸನ್ನಿವೇಶದಲ್ಲಿಯೂ ಸಹ ಅವರ ಅನಿಸಿಕೆಗಳೆ ನನಗೆ ಮಹತ್ವದಾಗಿವೆ. ಒಂದು ಕಡೆಗೆ ಈ ಉಪಚುನಾವಣೆ ಕುರಿತು ಭಾರತೀಯ ಜನತಾ ಪಕ್ಷದ ವರಿಷ್ಠ ಮುಖಂಡರು ಮತ್ತು ಮುಖ್ಯಮಂತ್ರಿಗಳ ಸೂಚನೆ, ಇನ್ನೊಂದೆಡೆ ನನ್ನ ರಾಜಕೀಯ ಮತ್ತು ಸಾಮಾಜಿಕ ಹೋರಾಟದ ನಿಜವಾದ ಶಕ್ತಿಯಾಗಿರುವ ಮತದಾರರು, ಮಾರ್ಗದರ್ಶಕರು, ಹಿತೈಷಿಗಳು, ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯಗಳಿಗೆ ಪೂರಕವಾದ ನಡೆ ಇವುಗಳ ಕುರಿತು ನಿರ್ಣಯ ಮಾಡಬೇಕಾಗಿದೆ.
ಕಾರಣ, ಈ ಮಹತ್ವದ ಸಭೆಯಲ್ಲಿ ತಮ್ಮೆಲ್ಲರ ಅಭಿಪ್ರಾಯಗಳಿಗೆ ಪೂರಕವಾಗಿ ಚರ್ಚಿಸಿ ನಿರ್ಣಯ ಮಾಡಬೇಕಾಗಿದೆ. ಇದೇ ಕಾರಣದಿಂದ ತಾವುಗಳು ಈ ಮಹತ್ವದ ಸಭೆಗೆ ಆಗಮಿಸಿ ತಮ್ಮ ಭಾವನೆಗಳಿಗೆ ಪೂರಕವಾದ ನಿರ್ದೇಶನ ನೀಡಬೇಕೆಂದು ಅವರು ವಿನಂತಿಸಿದ್ದಾರೆ.
ನಾಳೆ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ

Related Articles

Back to top button