ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಶುಕ್ರವಾರ ಮತ್ತೆ ಕೊರೋನಾ ಮಹಾಸ್ಫೋಟವಾಗಿದೆ. ಒಂದೇ ದಿನ 114 ಜನರಿಗೆ ಸೋಂಕು ಪತ್ತೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಇದು ದಾಖಲೆಯಾಗಿದೆ.
ಇನ್ನೂ 4245 ಜನರ ಸ್ಯಾಂಪಲ್ ರಿಸಲ್ಟ್ ಬರಬೇಕಿದೆ.
ಶುಕ್ರವಾರ ಬೆಳಗಾವಿಯಲ್ಲಿ 77 ಜನರಿಗೆ, ಚಿಕ್ಕೋಡಿಯಲ್ಲಿ 11, ಅಥಣಿಯಲ್ಲಿ 5, ರಾಯಬಾಗದಲ್ಲಿ 7, ರಾಮದುರ್ಗದಲ್ಲಿ 6, ಖಾನಾಪುರ, ಹುಕ್ಕೇರಿ, ಗೋಕಾಕ, ಬೈಲಹೊಂಗಲದಲ್ಲಿ ತಲಾ 1 ಹಾಗೂ ಇತರೆ 4 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.
ಸಧ್ಯಕ್ಕೆ ಜಿಲ್ಲೆಯಲ್ಲಿ 355 ಆ್ಯಕ್ಟಿವ್ ಕೇಸ್ ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಮತ್ತೆ 107 ಜನರಲ್ಲಿ ಒಮಿಕ್ರಾನ್ ಪತ್ತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ