
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ನಾಳೆ ಮದುವೆಯಾಗಬೇಕಿದ್ದ ಮದುಮಗಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಬೆಂಗಳೂರಿನ ಚಾಮರಾಜಪೇಟೆಯ 27 ವರ್ಷದ ಯುವತಿಗೆ ಭಾನುವಾರ ಮದುವೆ ನಿಶ್ಚಯವಾಗಿತ್ತು. ಇಂದು ಆರತಕ್ಷತೆ ನಡೆಯಬೇಕಿತ್ತು. ಆದರೆ ಆಕೆಗೆ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.
ಹಾಗಾಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಆಕೆಯ ಮನೆಗೆ ತೆರಳಿ ವಿಷಯ ತಿಳಿಸಿ ಮದುವೆ ರದ್ದುಪಡಿಸಲು ಸೂಚಿಸಿದ್ದಾರೆ. ಜೊತೆಗೆ ಆಕೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಿ, ಇಡೀ ಕುಟುಂಬವನ್ನು ಕ್ವಾರಂಟೈನ್ ಮಾಡಲಾಗಿದೆ.
ಇದೇ ವೇಳೆ, ಮದು ಮಗ ತಮಿಳುನಾಡಿನವನಾಗಿದ್ದು, ಆತನಿಗೂ ವಿಷಯ ತಿಳಿಸಿ ವಾಪಸ್ ಕಳಿಸಲಾಗಿದೆ. ಯುವತಿ ಗುಣಮುಖಳಾಗಿ ಮರಳಿದ ನಂತರ ಮದುವೆ ಮಾಡಿ ಎಂದು ಸೂಚಿಸಲಾಗಿದೆ.