ಕೊರೋನಾ ಮುಂಜಾಗ್ರತೆ: ಅಧಿಕಾರಿಗಳ ಜೊತೆ ಶಂಕರಗೌಡ ಪಾಟೀಲ ಸಭೆ

ಪ್ರಗತಿವಾಹಿನಿ ಸುದ್ದಿ, ಇಂಡಿ – ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಇಂದು ಇಂಡಿಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.

  ಕೊರೋನಾ (ಕೋವಿಡ್ 19) ತಡೆಗಟ್ಟುವ  ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಅವರು ಸುದೀರ್ಘವಾಗಿ ಚರ್ಚಿಸಿದರು. ಕೊರೋನಾ ಹರಡುವುದನ್ನು ತಡೆಗಟ್ಟಲು ತೆಗೆದುಕೊಂಡಿರುವ ಕ್ರಮ, ಸಾರ್ವಜನಿಕರಿಗೆ ಅವಶ್ಯಕ ವಸ್ತುಗಳು ಲಭ್ಯವಾಗುವಂತೆ ಮಾಡಿರುವ ವ್ಯವಸ್ಥೆಗಳ ಕುರಿತು ಶಂಕರಗೌಡ ಪಾಟೀಲ ವಿಚಾರಿಸಿದರು.

ಕೊರೋನಾ ವೈರಸ್ ಹರಡದಂತೆ ಸಾರ್ವಜವಿಕರಲ್ಲಿ ಅರಿವು ಮೂಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದಿಸೆಯಲ್ಲಿ ತಿಳಿವಳಿಕೆ ಕೊಡಬೇಕು. ಜನರಿಗೆ ನಿತ್ಯ ಅವಶ್ಯಕ ವಸ್ತುಗಳು ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಕೃಷಿ ಉತ್ಪನ್ನಗಳ ಸಾಗಾಣಿಕೆ ಮತ್ತು ಮಾರಾಟಕ್ಕೆ ಯಾವುದೇ ರೀತಿ ಅಡಚಣೆಯಾಗಬಾರದು ಎಂದು ಅವರು ಸೂಚಿಸಿದರು.

Home add -Advt

Related Articles

Back to top button