Kannada NewsKarnataka NewsLatestNational

ಬಹು ಅಂಗಾಂಗ ವೈಫಲ್ಯದಿಂದ ಆನೆ ಸಾವು

ಪ್ರಗತಿವಾಹಿನಿ ಸುದ್ದಿ, ಮೈಸೂರು: ಬಹು ಅಂಗಾಂಗ ವೈಫಲ್ಯದಿಂದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಆನೆಯೊಂದು ಮೃತಪಟ್ಟಿದೆ.

ಸುಬ್ರಹ್ಮಣ್ಯ ಎಂಬ 50 ವರ್ಷದ ಆನೆ ಮೃತಪಟ್ಟಿದ್ದು ಇದು ಆರ್ಥರೈಟೀಸ್ ಸಮಸ್ಯೆಯಿಂದ ಬಳಲುತ್ತಿತ್ತು. ಅರಣ್ಯ ಪ್ರದೇಶದ ಆನೆಚೌಕೂರಿನ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಇದನ್ನು ಪಳಗಿಸಲಾಗುತ್ತಿತ್ತು. ನಿತ್ರಾಣವಾಗಿ ಬಿದ್ದಿದ್ದ ಸುಬ್ರಹ್ಮಣ್ಯಗೆ ಪಶು ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದರೂ ಅದು ಬದುಕುಳಿಯಲಿಲ್ಲ.

Home add -Advt

ಮೂರು ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ವಲಯ ಅರಣ್ಯ ಪ್ರದೇಶದಲ್ಲಿ ಒಂದೇ ದಿನ ಇಬ್ಬರನ್ನು ಸಾಯಿಸಿದ್ದ ಕಾಡಾನೆಯನ್ನು ಹಿಡಿದು ನಾಗರಹೊಳೆ ಉದ್ಯಾನವನದ ಮತ್ತಿಗೋಡು ವಲಯದ ಕಂಠಾಪುರ ಸಾಕಾನೆ ಶಿಬಿರಕ್ಕೆ ತರಲಾಗಿತ್ತು. ಈ ಕಾಡಾನೆ ಸುಬ್ರಹ್ಮಣ್ಯ ವಲಯದಲ್ಲಿ ಸೆರೆ ಸಿಕ್ಕಿದ್ದರಿಂದಾಗಿ ಸುಬ್ರಹ್ಮಣ್ಯನೆಂದು ಹೆಸರಿಡಲಾಗಿತ್ತು. ಜು.20ರಂದು ಕ್ರಾಲ್‌ನಿಂದ ಆನೆಯನ್ನು ಮುಕ್ತಗೊಳಿಸಿ ಮಾವುತ ಶಿವು, ಕವಾಡಿ ಚಂದ್ರ ಅವರ ಉಸ್ತುವಾರಿಯಲ್ಲಿ ತರಬೇತಿ ನೀಡಲಾಗುತ್ತಿತ್ತು.

Related Articles

Back to top button