ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ಸಡಿಲಗೊಂಡ ಬೆನ್ನಲ್ಲೇ ಕೊರೊನಾ ಸೋಂಕಿನಲ್ಲಿ ದಾಖಲೆ ಪ್ರಮಾಣದಲ್ಲಿ ಹೆಚ್ಚಿದ್ದು, ಇಂದು ಒಂದೇ ದಿನ 149 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1395ಕ್ಕೆ ಏರಿಕೆಯಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ ಮಂಡ್ಯದಲ್ಲಿ 71, ಬೆಂಗಳೂರು 12, ಕಲಬುರಗಿ 13, ದಾವಣಗೆರೆಯಲ್ಲಿ 22, ಬಾಗಲಕೋಟೆ 5, ಉತ್ತರ ಕನ್ನಡ 4, ಚಿಕ್ಕಮಗಳೂರಿನಲ್ಲಿ 2, ಶಿವಮೊಗ್ಗ 13, ಉಡುಪಿ 4, ಹಾಸನ 3, ಗದಗ 1, ಯಾದಗಿರಿ 1, ವಿಜಯಪುರ 1, ಚಿತ್ರದುರ್ಗದಲ್ಲಿ 1 ಕೇಸ್ ಪತ್ತೆಯಾಗಿದೆ.
ಮಂಡ್ಯದಲ್ಲಿ ಇಂದು ಸೋಂಕು ಪತ್ತೆಯಾದ 71 ಜನರು ಕೂಡ ಮುಂಬೈನಿಂದ ಬಂದವರಾಗಿದ್ದಾರೆ.
ರಾಜ್ಯದಲ್ಲಿ 1395 ಸೋಂಕು ಪೀಡಿತರ ಪೈಕಿ 549 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು 40 ಜನರು ಸೋಂಕಿಗೆ ಬಲಿಯಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ