Kannada NewsLatest

ರಾಜ್ಯದಲ್ಲಿ 4,537 ಮತ್ತು ಬೆಳಗಾವಿಯಲ್ಲಿ 137 ಕೊರೊನಾ ಸೋಂಕು

ಬೆಳಗಾವಿಯಲ್ಲಿ 137

 

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಶರವೇಗದಲ್ಲಿ ಹೆಚ್ಚುತ್ತಿದ್ದು, ಪ್ರತೀ ದಿನ ತನ್ನ ದಾಖಲೆಯನ್ನು ತಾನೇ ಮುರಿದು ಮುನ್ನುಗ್ಗುತ್ತಿದೆ. ಇಂದು ಒಂದೇ ದಿನ 4,537 ಜನರಲ್ಲಿ ಕೊರೊನಾ ಪಾಸಿಟೀವ್ ಪತ್ತೆಯಾಗಿದೆ.

ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಇಂದು 93 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು 2125 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 29,521ಕ್ಕೆ ಏರಿಕೆಯಾಗಿದೆ. ಸೋಂಕಿಗೆ ಇಂದು 49 ಜನ ಬಲಿಯಾಗಿದ್ದು, ಈ ಮೂಲಕ ಬೆಂಗಳೂರಿನಲ್ಲಿ 631 ಜನ ಕೊರೊನಾಗೆ ಸಾವನ್ನಪ್ಪಿದ್ದಾರೆ ಎಂದರು.

ಇಂದು ರಾಜಧಾನಿಯಲ್ಲಿ ಎರಡು ಠಾಣೆಯ 10 ಪೊಲೀಸರು ಸೇರಿದಂತೆ ಒಂದೇ ದಿನ 26 ಪೊಲೀಸರಲ್ಲಿ ಸೋಂಕು ದೃಢಪಟ್ಟಿದೆ ಎಂದು ಹೇಳಿದರು.

ಬೆಳಗಾವಿ ಜಿಲ್ಲೆಯಲ್ಲಿ ಇಂದು 137 ಜನರಿಗೆ ಸೋಂಕು ಪತ್ತೆಯಾಗಿದೆ. ಬೆಂಗಳೂರಿನಲ್ಲಿ 2125, ದಕ್ಷಿಣ ಕನ್ನಡ 509, ಧಾರವಾಡ 186, ವಿಜಯಪುರ 176, ಬಳ್ಳಾರಿ 155, ಉತ್ತರ ಕನ್ನಡ 116, ಶಿವಮೊಗ್ಗ 114, ಉಡುಪಿ 109, ಚಿಕ್ಕಬಳ್ಳಾಪುರ 107, ಮೈಸೂರು 101, ಬೆಂಗಳೂರು ಗ್ರಾಮಂತರ 94, ಕಲಬುರಗಿ, ಗದಗ 82, ಬೀದರ್ 72, ದಾವಣಗೆರೆ 56 ಪ್ರಕರಣ ಪತ್ತೆಯಾಗಿದೆ.

ಹಾಸನ 51, ಮಂಡ್ಯ 42, ಕೋಲಾರ 35, ಚಾಮರಾಜನಗರ 34, ತುಮಕೂರು, ಚಿಕ್ಕಮಗಳೂರು 24, ಚಿತ್ರದುರ್ಗ 22, ರಾಯಚೂರು 16, ಹಾವೇರಿ 15, ಬಾಗಲಕೋಟೆ, ಕೊಪ್ಪಳ, ರಾಮನಗರ ತಲಾ 13, ಕೊಡಗು 10, ಯಾದಗಿರಿ 4 ಪ್ರಕರಣ ಪತ್ತೆಯಾಗಿದೆ.

ಇಂದು ರಾಜ್ಯದಲ್ಲಿ 93 ಜನರು ಸಾವಿಗೀಡಾಗಿದ್ದಾರೆ. ಬೆಂಗಳೂರಿನಲ್ಲಿ 49, ದಕ್ಷಿಣ ಕನ್ನಡದಲ್ಲಿ 7, ಧಾರವಾಡದಲ್ಲಿ 6, ಕಲಬುರಗಿಯಲ್ಲಿ 5 ಜನರು ಸಾವಿಗೀಡಾಗಿದ್ದಾರೆ. ಬಳ್ಳಾರಿ, ಬೆಳಗಾವಿ, ದಾವಣೆಗೆರೆ, ಬಾಗಲಕೊಟೆ, ತುಮಕೂರಲ್ಲಿ ತಲಾ ಮೂವರು ಸಾವಿಗೀಡಾಗಿದ್ದಾರೆ.

ರಾಜ್ಯದಲ್ಲಿ ಒಟ್ಟೂ 59,652 ಜನರಿಗೆ ಸೋಂಕು ತಗುಲಿದಂತಾಗಿದೆ. ಮೃತರಾದವರ ಸಂಖ್ಯೆ 1240ಕ್ಕೇರಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button