Latest

ರಾಜ್ಯದಲ್ಲಿ ಈವರೆಗಿನ ದಾಖಲೆ ಮುರಿದು ಅಟ್ಟಹಾಸ ಮುಂದುವರೆಸಿದ ಕೊರೊನಾ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಇದುವರೆಗಿನ ದಾಖಲೆಗಳನ್ನು ಮುರಿದು ಅಟ್ಟಹಾಸ ಮುಂದುವರೆಸಿದ್ದು, ಇಂದು ಒಂದೇ ದಿನದಲ್ಲಿ ಕರ್ನಾಟಕದಲ್ಲಿ 515 ಕೊರೊನಾ ಪಾಸಿಟೀವ್ ಕೇಸ್ ಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4835ಕ್ಕೆ ಏರಿಕೆಯಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಹೆಲ್ತ್ ಬುಲೆಟಿನ್ ಪ್ರಕಾರ ಇಂದು ಉಡುಪಿ ಜಿಲ್ಲೆಯೊಂದರಲ್ಲೇ 204 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ 768ಕ್ಕೆ ಏರಿಕೆಯಾಗಿದೆ. ಎಲ್ಲಾ ಸೋಂಕಿತರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.

ಉಡುಪಿ 204,ಬೆಳಗಾವಿ 36, ಉತ್ತರ ಕನ್ನಡ 7, ದಕ್ಷಿಣಕನ್ನಡ 8, ಹಾಸನ 3, ಕಲಬುರಗಿ 42, ಯಾದಗಿರಿ 74, ಬೆಂಗಳೂರು 10, ಬೆಂಗಳೂರು ಗ್ರಾಮಾಂತರ 12, ರಾಮನಗರ 2, ಕೋಲಾರ 1, ಬಳ್ಳಾರಿ 1, ಧಾರವಾಡ 3, ಮಂಡ್ಯ 13, ಬೀದರ್ 39, ವಿಜಯಪುರ 53, ಹಾವೇರಿ 2, ದಾವಣಗೆರೆ 1 ಕೇಸ್ ಪತ್ತೆಯಾಗಿದೆ.

ಇಂದು ರಾಜ್ಯದಲ್ಲಿ ಪತ್ತೆಯಾದ 515 ಜನರಲ್ಲಿ 482 ಜನರು ಅಂತರಾಜ್ಯದಿಂದ ಬಂದವರಾಗಿದ್ದು, ಇವರಲ್ಲಿ 473ಕೇಸ್ ಗಳು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.

Home add -Advt

Related Articles

Back to top button