ರಾಜ್ಯದಲ್ಲಿ ಇಂದು 178 ಜನರಿಗೆ ಕೊರೋನಾ ಸೋಂಕು ಪತ್ತೆ

ಅತಿಹೆಚ್ಚು ಕೊರೊನಾ ಪೀಡಿತ ದೇಶದ ಟಾಪ್ 10 ಪಟ್ಟಿಯಲ್ಲಿ ಭಾರತದ ಸ್ಥಾನ ಎಷ್ಟು ಗೊತ್ತೇ?

 

ಪ್ರಗತಿವಾಹಿನಿ ಸುದ್ದಿ; ನವದೆಹಲಿ/ ಬೆಂಗಳೂರು : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 7,466 ಜನರು‌ ಹೊಸದಾಗಿ ಕೊರೋನಾ ಪೀಡಿತರಾಗಿದ್ದಾರೆ. ಇದರಿಂದ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 1,65,799ಕ್ಕೆ ಏರಿಕೆಯಾಗಿದೆ. ಅಲ್ಲದೇ ಭಾರತ ಜಾಗತಿಕವಾಗಿ ಅತಿಹೆಚ್ಚು ಕೊರೋನಾ ಪೀಡಿತರಿರುವ ದೇಶಗಳ ಟಾಪ್ 10 ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಏರಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಅಮೇರಿಕಾ ಮೊದಲ ಸ್ಥಾನದಲ್ಲಿದೆ. ಬ್ರಿಜಿಲ್ ಮತ್ತು ರಷ್ಯಾ‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. 10ನೇ ಸ್ಥಾನದಲ್ಲಿದ್ದ ಭಾರತ ಟರ್ಕಿಯನ್ನು ಹಿಂದೂಡಿ ಈಗ 9ನೇ ಸ್ಥಾನಕ್ಕೆ ಬಂದಿದೆ. ಇದಕ್ಕೂ‌ ಮೊದಲು ಇರಾನ್ ಅನ್ನು‌ ಹಿಂದಿಕ್ಕಿ‌ 10 ಸ್ಥಾನದತ್ತ ಧಾವಿಸಿತ್ತು. ಚೀನಾವನ್ನು ಹಿಂದೂಡಿ 11ನೇ ಸ್ಥಾನಕ್ಕೆ ಬಂದಿತ್ತು.

ಒಂದೇ ದಿನ ಭಾರತದಲ್ಲಿ ಕೊರೋನಾದಿಂದ 175 ಜನ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಸತ್ತವರ ಸಂಖ್ಯೆ 4,706ಕ್ಕೆ ಏರಿಕೆಯಾಗಿದೆ. ಕೊರೋನಾದಿಂದ ಈವರೆಗೆ 71,105 ಜನ ಗುಣಮುಖ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದೆ.

ಇನ್ನು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಮೇ 10ರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಪ್ರತಿನಿತ್ಯ ನಾಲ್ಕು ಸಾವಿರಕ್ಕಿಂತ ಹೆಚ್ಚಾಗುತ್ತಲೇ ಇದೆ.‌ ಮೇ 10ರಂದು 4,213 ಜನರಿಗೆ, ಮೇ 11ರಂದು 3,064 ಮಂದಿಗೆ, ಮೇ 12 ರಂದು 3,525 ಜನರಿಗೆ, ಮೇ13ರಂದು 3,722 ಮಂದಿಗೆ ಹಾಗೂ ಮೇ 14 ರಂದು 3,967 ಜನರಿಗೆ, ಮೇ 15 ರಂದು 3,970 ಮಂದಿಗೆ, ಮೇ 16 ರಂದು 4,987 ಜನರಿಗೆ, ಮೇ 17 ರಂದು 5,242, ಮೇ 18 ರಂದು 4,970, ಮೇ 19 ರಂದು 5,611, ಮೇ 20 ರಂದು 5,609, ಮೇ 21 ರಂದು 6,088, ಮೇ 22 ರಂದು 6,654, ಮೇ 23 ರಂದು 6,767, ಮೇ 24 ರಂದು 6,977, ಮೇ 25 ರಂದು 6,535, ಮೇ 26 ರಂದು 6,387, ಮೇ 27 ರಂದು 6,566 ಮತ್ತು ಮೇ 28 ರಂದು 7,466 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಇಂದು ರಾಜ್ಯದಲ್ಲಿ 178

ಕರ್ನಾಟಕದಲ್ಲಿ ಇಂದು ಒಟ್ಟೂ 178 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟೂ 2711 ದಾಟಿದೆ.  ಯಾದಗಿರಿಯಲ್ಲಿ 60, ರಾಯಚೂರಲ್ಲಿ 62, ಉಡುಪಿಯಲ್ಲಿ 15, ಕಲಬುರಗಿಯಲ್ಲಿ 15, ಬೆಂಗಳೂರಲ್ಲಿ 9, ಚಿಕ್ಕಮಗಳೂರಲ್ಲಿ 4, ಮಂಡ್ಯದಲ್ಲಿ 4, ಶಿವಮೊಗ್ಗದಲ್ಲಿ 1, ದಾವಣಗೆರೆಯಲ್ಲಿ 4, ಬೆಂಗಳೂರು ಗ್ರಾಮಾಂತರದಲ್ಲಿ 1 ಜನರಿಗೆ ಸೋಂಕು ಪತ್ತೆಯಾಗಿದೆ.

178ರಲ್ಲಿ 156 ಜನರು ಮಹಾರಾಷ್ಟ್ರದಿಂದ ವಾಪಸ್ ಬಂದವರೇ ಆಗಿದ್ದಾರೆ. 15 ವರ್ಷದೊಳಗಿನ 34 ಮಕ್ಕಳು. 68 ಜನರು ಮಹಿಳೆಯರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button