Latest

ರಾಜ್ಯಕ್ಕೆ ಕೊರೊನಾಘಾತ; ಇಂದು ಒಂದೇ ದಿನದಲ್ಲಿ 84 ಜನರಲ್ಲಿ ಸೋಂಕು ಪತ್ತೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ನಿಯಮ ಸಡಿಲಿಕೆಯಾದ ಬೆನ್ನಲ್ಲೇ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇಂದು ಒಂದೇ ದಿನದಲ್ಲಿ ಅತಿ ಹೆಚ್ಚು ಜನರಲ್ಲಿ ಕೊರೊನಾ ಪಾಸಿಟೀವ್ ಕಂಡು ಬಂದಿದೆ. ಇಂದು ರಾಜ್ಯದಲ್ಲಿ 84 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1231ಕ್ಕೆ ಏರಿಕೆಯಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಬೆಳಗಿನ ಮಾಹಿತಿ ಪ್ರಕಾರ ಇಂದು ಒಂದೇ ದಿನ ರಾಜ್ಯದಲ್ಲಿ ಬರೋಬ್ಬರಿ 84 ಹೊಸ ಕೊರೊನ ಕೇಸ್ ಪತ್ತೆಯಾಗಿದೆ.
ಬೆಂಗಳೂರು 18 ಮಂಡ್ಯದಲ್ಲಿ 17, ರಾಯಚೂರು 6, ಕೊಪ್ಪಳ 3, ಹಾಸನ 4, ವಿಜಯಪುರ 4, ಗದಗ 5, ಯಾದಗಿರಿ 5, ಉತ್ತರ ಕನ್ನಡ 8, ಕಲಬುರಗಿ 5, ಬೆಳಗಾವಿಯಲ್ಲಿ 2, ಬಳ್ಳಾರಿ 1, ದಾವಣಗೆರೆ 1, ಮೈಸೂರು 1, ಕೊಡಗು 1 ಕೇಸ್ ಪತ್ತೆಯಾಗಿದೆ.

ಉತ್ತರ ಕನ್ನಡದಲ್ಲಿ ಈವರೆಗೆ ಭಟ್ಕಳದಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಕೊರೋನಾ ಈಗ ಮುಂಡಗೋಡ, ಹೊನ್ನಾವರ, ಮುರಡೇಶ್ವರಕ್ಕೂ ಕಾಲಿಟ್ಟಿದೆ.

ರಾಜ್ಯದಲ್ಲಿ ಚಿಕ್ಕ ಮಕ್ಕಳಲ್ಲಿ ಕೊರೊನಾ ಸೋಂಕು ಹರಡುತ್ತಿದ್ದು, ಇಂದು 10 ವರ್ಷದ ಒಳಗಿನ 10 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ. ಇನ್ನು 84 ಸೋಂಕಿತರ ಪೈಕಿ 57 ಜನರಿಗೆ ಮಹಾರಾಷ್ಟ್ರದ ನಂಟಿರುವುದು ಕಂಡುಬಂದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button