ಊರಿಂದ ಟ್ರ್ಯಾಕ್ಟರ್ ತರಿಸಿಕೊಂಡು ಊರಿಗೆ ಹೊರಟ ಕೂಲಿ ಕಾರ್ಮಿಕರು

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಕೊರೊನಾ ಭೀತಿ ಹಿನ್ನಲೆಯಲ್ಲಿ ಇಡೀ ದೇಶದಲ್ಲಿ 21 ದಿನಗಳ ಕಾಲ ಲಾಕ್ ಡೌನ್ ಘೋಷಿಸಲಾಗಿದೆ. ಈ ನಡುವೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಫಿ-ಮೆಣಸು ಕೊಯ್ಯಲು ಹಾವೇರಿಯಿಂದ ಬಂದಿದ್ದ ಕೂಲಿ ಕಾರ್ಮಿಕರು ತಮ್ಮ ಜಿಲ್ಲೆ ಹಾವೇರಿಯಿಂದ ಟ್ರ್ಯಾಕ್ಟರ್ ತರಿಸಿಕೊಂಡು ವಾಪಸ್ ಊರಿಗೆ ಹಿಂದಿರುಗಿದ್ದಾರೆ.

ಕೂಲಿ ಕೆಲಸಕ್ಕಾಗಿ ಹಾವೇರಿಯಿಂದ ಮೂಡಿಗೆರೆ ತಾಲೂಕಿಗೆ ನೂರಾರು ಜನರು ಬಂದಿದ್ದರು. ಆದರೆ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹಾಗೂ ಶಂಕಿತರ ಸಂಖ್ಯೆ ಹೆಚ್ಚುತ್ತಿರಿವುದರಿಂದ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಕಾರ್ಮಿಕರು ಅತಂತ್ರಕ್ಕೀಡಾಗಿದ್ದಾರೆ.

ಕಾಫಿ ತೋಟದಲ್ಲಿ ಕೆಲಸ ಕೂಡ ನಿಂತಿದೆ. ಹಾಗಾಗಿ ಅವರು ತಮ್ಮ ಊರಿಗೆ ಹಿಂದಿರುಗಲು ಸ್ಥಳಿಯ ಗಾಡಿಗಳನ್ನು ಬಾಡಿಗೆ ಕೇಳಿದ್ದಾರೆ. ಆದರೆ ಲಾಕ್‍ಡೌನ್ ಆಗಿರುವುದರಿಂದ ವಾಹನದವರು ಹಾವೇರಿಗೆ ಬಾಡಿಗೆ ಬರಲು ನಿರಾಕರಿಸಿದ್ದಾರೆ. ಹಾಗಾಗಿ 21 ದಿನ ಇರುವುದು ಕಷ್ಟವೆಂದು ಕೂಲಿ ಕಾರ್ಮಿಕರು ಹಾವೇರಿಯಿಂದ ಟ್ರ್ಯಾಕ್ಟರ್ ತರಿಸಿಕೊಂಡು ಗಂಟು-ಮೂಟೆ ಸಮೇತ ತಮ್ಮ ಊರಿಗೆ ಹಿಂದಿರುಗಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button