Latest

ಕೊರೊನಾದಿಂದ ಗುಣಮುಖರಾದ ಮಕ್ಕಳಲ್ಲಿ ಕಂಡುಬರುತ್ತಿದೆ MISC ಸಮಸ್ಯೆ

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಕೊರೊನಾ ಎರಡನೇ ಅಲೆ ನಡುವೆಯೇ ಮಕ್ಕಳಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದೆ ಇದು ಮೂರನೇ ಅಲೆ ಭೀತಿಗೂ ಕಾರಣವಾಗಿದೆ. ಆದರೆ ಇದೀಗ ಕೊರೊನಾದಿಂದ ಗುಣಮುಖರಾದ ಮಕ್ಕಳಲ್ಲಿ ಎಂಐಎಸ್ ಸಿ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ಆತಂಕ ಸೃಷ್ಟಿಸಿದೆ.

ಹೌದು. ಕೊರೊನಾದಿಂದ ಗುಣಮುಖರಾಗುತ್ತಿರುವ ಮಕ್ಕಳಲ್ಲಿ ಇದೀಗ ಮಲ್ಟಿಸಿಸ್ಟಮ್ ಇನ್ ಫ್ಲಾಮೇಟರಿ ಸಿಂಡ್ರೋಮ್ ಇನ್ ಚಿಲ್ಡ್ರನ್-MISC ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಬಾಗಲಕೋಟೆಯ ಐವರು ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಕುಮಾರೇಶ್ವರ ಆಸ್ಪತ್ರೆಯ ಐಸಿಯುನಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Home add -Advt

ಚಿಕಿತ್ಸೆ ಬಳಿಕ ಇಬ್ಬರು ನವಜಾತಶಿಶುಗಳು ಡಿಸ್ಚಾರ್ಜ್ ಆಗಿದ್ದು, ಮೂವರು ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಕೊರೊನಾದಿಂದ ಗುಣಮುಖರಾದ ಬಳಿಕ 3ವಾರದಿಂದ 3ತಿಂಗಳಲ್ಲಿ ಮಕ್ಕಳಲ್ಲಿ ಈ ಹೊಸ ಸಮಸ್ಯೆ ಎದುರಾಗುತ್ತಿದೆ.
ಕೊರೊನಾ 2ನೇ ಅಲೆಯಲ್ಲಿ ಹೊಸ ದಾಖಲೆ

Related Articles

Back to top button