Kannada NewsKarnataka News

ಗಾಂಜಾ ಮಾರಾಟ: ಬೆಳಗಾವಿಯಲ್ಲಿ ಮತ್ತೆ ಮೂವರ ಬಂಧನ

ಮಾಳಮಾರುತಿ ಪೊಲೀಸರ ಕಾರ್ಯಾಚರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಮಾಳಮಾರುತಿ ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ ಗಾಂಜಾ ಮಾರುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.

Home add -Advt

ಮಾಳಮಾರುತಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್  ಸುನೀಲ ಪಾಟೀಲ ನೇತೃತ್ವದ ತಂಡ ಅಶೋಕನಗರ ಇಎಸ್‌ಐ ಆಸ್ಪತ್ರೆಯ ಸಮೀಪ ದಾಳಿ ಮಾಡಿ, ಗಾಂಜಾ ಮಾರಾಟ ಮಾಡುತ್ತಿದ್ದ,
೧) ಸರ್ಫರಾಜ ಸಜರ ಮುಲ್ಲಾ, (೩೫) ಸಾ: ನ್ಯೂ ಗಾಂಧಿನಗರ ಬೆಳಗಾವಿ.
೨) ಜಾಫರ ಹುಸೇನಸಾಬ ಸೊಲ್ಲಾಪೂರ, (೨೪) ಸಾ: ವಡ್ಡರವಾಡಿ ಬೆಳಗಾವಿ,
೩) ನರೇಶ ತಂದೆ ಗೌಡಾ ಲೋಂಡೆ, (೪೮) ಸಾ|| ಗ್ಯಾಂಗವಾಡಿ ಬೆಳಗಾವಿ.

ಇವರನ್ನು ಬಂಧಿಸಿದೆ.

ಬಂಧಿತರಿಂದ ೧ ಕೆಜಿ. ೪೫ ಗ್ರಾಂ ತೂಕದ ಗಾಂಜಾ ಅಂದಾಜು ಬೆಲೆ ರೂ. ೧೦,೪೫೦/-,   ಹಣ ೫೦೦/- ರೂ, ಮತ್ತು ನಂಬರ ಪ್ಲೇಟ್ ಇಲ್ಲದ ಸ್ಕೂಟಿ ಒಂದು , ೫,೦೦೦ ರೂ ಇವುಗಳನ್ನು ಜಪ್ತು ಪಡಿಸಿಕೊಂಡು, ತನಿಖೆ ಮುಂದುವರೆಸಲಾಗಿದೆ.
ಈ ಪ್ರಕರಣವನ್ನು ಭೇದಿಸಿದ ತಂಡದ ಕಾರ್ಯವನ್ನು ಪೊಲೀಸ್ ಆಯುಕ್ತರು ಹಾಗೂ  ಪೊಲೀಸ್ ಉಪ ಆಯುಕ್ತರು  ಶ್ಲಾಘಿಸಿದ್ದಾರೆ.

ಸುವರ್ಣವಿಧಾನ ಸೌಧದ ಆವಾರದಲ್ಲಿ ಶಾವಿಗೆ, ಹಪ್ಪಳ, ಸಂಡಿಗೆ !

Related Articles

Back to top button