ಪ್ರಗತಿವಾಹಿನಿ ಸುದ್ದಿ; ಬೆಂಗಳೂರು : ದೇಶಾದ್ಯಂತ ಎರಡನೇ ಅವಧಿ ಲಾಕ್ ಡೌನ್ ಜಾರಿಗೆ ಬಂದಿದ್ದರೂ ಕೂಡ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ವರೆಗೆ ದೇಶದಲ್ಲಿ 1,118 ಕ್ಕೂ ಹೆಚ್ಚು ಹೊಸ ಕೊರೋನಾ ಪ್ರಕರಣ ದಾಖಲಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 12,000ದ ಗಡಿ ಸಮೀಪಿಸಿದೆ.
ಭಾರತದಲ್ಲಿ ಈವರೆಗೆ 11,933 ಪ್ರಕರಣ ದಾಖಲಾಗಿದೆ. ಈ ಪೈಕಿ 10,197 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 1,343 ಜನರು ಗುಣಮುಖರಾಗಿದ್ದಾರೆ. 24 ಗಂಟೆಯಲ್ಲಿ ಒಟ್ಟು 40 ಸಾವು ಸಂಭವಿಸಿದೆ. ಈ ಪೈಕಿ ಮಹಾರಾಷ್ಟ್ರ 18, ಉತ್ತರ ಪ್ರದೇಶ 6, ಗುಜರಾತ್ 4 , ಮಧ್ಯಪ್ರದೇಶ 3, ದೆಹಲಿ ಹಾಗೂ ಕರ್ನಾಟಕದಲ್ಲಿ ತಲಾ 3, ತೆಲಂಗಾಣ, ತಮಿಳುನಾಡು, ಪಂಜಾಬ್ ಹಾಗೂ ಮೇಘಾಲಯದಲ್ಲಿ ತಲಾ ಒಂದು ಸಾವು ಸಂಭವಿಸಿದೆ.
ಕೊರೋನಾದಿಂದಾಗಿ ಈವರೆಗೆ ಒಟ್ಟು 392 ಸಾವು ಸಂಭವಿಸಿದೆ. ಮಹಾರಾಷ್ಟ್ರ ಒಂದರಲ್ಲೇ 178 ಜನರು ಮೃತಪಟ್ಟಿದ್ದಾರೆ. ಉಳಿದಂತೆ ಮಧ್ಯಪ್ರದೇಶ 53, ದೆಹಲಿ ಮತ್ತು ಗುಜರಾತ್ನಲ್ಲಿ ತಲಾ 30, ತೆಲಂಗಾಣದಲ್ಲಿ 18, ಪಂಜಾಬ್ 13, ತಮಿಳುನಾಡು 12, ಉತ್ತರ ಪ್ರದೆಶ ಹಾಗೂ ಕರ್ನಾಟಕ ತಲಾ 13 ಜನರು ಸಾವನ್ನಪ್ಪಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ