ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದ್ದು, ಇಂದು ಮತ್ತು ನಾಳೆ ಶಿವಮೊಗ್ಗ, ಚಿತ್ರದುರ್ಗ ಹಾಗೂ ದಾವಣಗೆರೆ ಹಾಲು ಒಕ್ಕೂಟ ರೈತರಿಂದ ಹಾಲು ಖರೀದಿಸದಿರಲು ನಿರ್ಧರಿಸಿದೆ.
ಈಗಾಗಲೇ ಡೈರಿಯಲ್ಲಿಯೆ ಹೆಚ್ಚಿನ ಪ್ರಮಾಣದ ಹಾಲು ಶೇಖರಣೆ ಆಗಿದ್ದು, ಸರಬರಾಜು ಆಗುತ್ತಿಲ್ಲ. ಈ ಹಿನ್ನಲೆಯಲ್ಲಿ ಶಿವಮೊಗ್ಗ ಹಾಲು ಒಕ್ಕೂಟದ ವ್ಯಾಪ್ತಿಗೆ ಒಳಪಡುವ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮೂರು ಜಿಲ್ಲೆಯಲ್ಲಿಯೂ ಹಾಲು ಖರೀದಿ ಸ್ಥಗಿತಗೊಳಿಸಲಾಗುತ್ತಿದೆ. ಈ ಕುರಿತು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಹೇಳಿಕೆ ನೀಡಿದ್ದಾರೆ.
ಪ್ರತಿನಿತ್ಯ ಮೂರು ಜಿಲ್ಲೆಗಳಿಂದ ಶಿಮುಲ್ ಒಕ್ಕೂಟ 5.20 ಲಕ್ಷ ಲೀಟರ್ ಹಾಲು ಸಂಗ್ರಹ ಮಾಡುತ್ತಿದೆ. ಇದರಲ್ಲಿ 2.50 ಲಕ್ಷ ಲೀಟರ್ ಹಾಲು ದಿನನಿತ್ಯ ಮಾರಾಟ ಮಾಡಲಾಗುತ್ತದೆ. ಉಳಿದ ಹಾಲನ್ನು ಪೌಡರ್ ಮತ್ತಿತರ ಉತ್ಪನಗಳ ತಯಾರಿಕೆಗೆ ಶಿಮುಲ್ ಪೂರೈಕೆ ಮಾಡುತ್ತಿತ್ತು. ಅಂತರಾಜ್ಯ ಗಡಿ ಬಂದ್ ಹಿನ್ನೆಲೆಯಲ್ಲಿ ಹಾಲು ಉಳಿದುಕೊಳ್ಳುತ್ತಿದೆ. ಲಾಕ್ ಡೌನ್ ಬಳಿಕ 1.90 ಲಕ್ಷ ಲೀಟರ್ ಗೆ ಹಾಲಿನ ಮಾರಾಟ ಕುಸಿದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ