Belagavi NewsBelgaum NewsPolitics

*ಫೈನಾನ್ಸ್ ಮೂಲಕ ಜನರಿಗೆ ನೂರಾರು ಕೋಟಿ ವಂಚನೆ ಆಗಿರೊದು ನಿಜ: ಸಚಿವ ಸತೀಶ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾಯಲ್ಲಿ ಮೈಕ್ರೋ ಫನಾನ್ಸ್ ನಿಂದ ಹಣ ಪಡೆದು ವಂಚಗೆ ಒಳಗಾದ ಮಹಿಳೆಯರ ಬಗ್ಗೆ‌ ಚರ್ಚೆ ಮಾಡಲಾಗಿದೆ. ಮಹಿಳೆಯರಿಗೆ ತೊಂದರೆ ಕೊಡದಂತೆ ಡಿಸಿ ಮತ್ತು ನಾವು ಫೈನಾನ್ಸ್ ಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ‌ ಸಚಿವ ಸತೀಶ್ ಜಾರಕಿಹೊಳಿ‌ ಅವರು ಹೇಳಿದರು. 

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಿಲ್ಲೆಯ ಮೂರ್ನಾಲ್ಕು ತಾಲೂಕುಗಳಲ್ಲಿ ಕಳೆದ ಒಂದು ತಿಂಗಳಿಂದ ಮೈಕ್ರೋ ಫೈನಾನ್ಸ್ ನಿಂದ ಸಾಲದ ವಿಚಾರವಾಗಿ ಗೊಂದಲ ಸೃಷ್ಠಿಯಾಗಿದೆ. ಸುಮಾರು ಹದಿ‌ನೈದು ಸಾವಿರ ಜನರಿಗೆ ಗೊತ್ತಿಲ್ಲದೆ ಲೋನ್ ಕೊಟ್ಟಿದ್ದಾರೆ. ಅದು ಸಬ್ಸಿಡಿ ಹಣ ಎಂದು ಕೊಟ್ಟಿದ್ದಾರೆ. ಅದು ಸಬ್ಸಿಡಿ ಹಣ ಅಲ್ಲಾ, ಲೋನ್ ಹಣ ಅದು. ನಾಲ್ಕೈದು ಜನ ಮಹಿಳೆಯರೆ ಇದರ ನೇತೃತ್ವ ವಹಿಸಿದ್ದಾರೆ. ಈ ವಿಚಾರ ಕುರಿತು ಈಗಾಗಲೇ ಒಬ್ಬರನ್ನು ಅರೆಸ್ಟ್ ಮಾಡಿದ್ದೇವೆ. ಇನ್ನು ಇಬ್ಬರ ಬಗ್ಗೆ ತನಿಖೆ ಮಾಡಲು ಹೇಳಿದ್ದೇವೆ. ಪೊಲೀಸ್ ಅಧಿಕಾರಿಗಳನ್ನು ನೇಮಿಸುವ ಕೆಲಸ ಮಾಡುತ್ತೇವೆ. ಇದರಲ್ಲಿ ದುಡ್ಡು ಮೂರನೇ ವ್ಯಕ್ತಿಗೆ ಹೇಗೆ ಹೋಗಿದೆ ಎಂದು ಪ್ರಶ್ನೆ ಬಂದಿದೆ. ಅವರ ಅಕೌಂಟಗೆ ಬಂದ ದುಡ್ಡು ಮೂರನೇ ವ್ಯಕ್ತಿಗೆ ಹೋಗಿದೆ. ಈಗಾಗಲೇ ಫೈನಾನ್ಸ್ ದವರು ಮಹಿಳೆಯರಿಗೆ ತೊಂದರೆ ಕೊಡದಂತೆ ಡಿಸಿ ಮತ್ತು ನಾವು ಸೂಚನೆ ಕೊಟ್ಟಿದ್ದೇವೆ. ಹದಿನೈದು ಸಾವಿರ ಮಂದಿಗೆ 40 ಪೈನಾನ್ಸದವರು ಹಣ ಕೊಟ್ಟಿದ್ದಾರೆ. ಅಂದಾಜು ನೂರು ಕೋಟಿ ಮೇಲೆ ಆಗಿದೆ. ಇದರಲ್ಲಿ ಖಂಡಿತ ಮೋಸ ಆಗಿದೆ. ಯಾರು ಮಾಡಿದ್ದಾರೆ ಎಂದು ಕಂಡು ಹಿಡಿಯಬೇಕಿದೆ. ಸಬ್ಸಿಡಿ ಹಣ ಬರುತ್ತೆ ಎಂದು ಮಹಿಳೆಯರು ಸಹಿ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಈ ರೀತಿ ಫರ್ಸ್ಟ್ ಟೈಮ್ ಆಗಿದೆ ಎಂದರು.

ಹದಿನೈದು ಸಾವಿರ ಮಹಿಳೆಯರಿಗೆ ಮೋಸ; ಮೂವರು ಪೊಲೀಸ್ ಅಧಿಕಾರಿಗಳ ತಂಡ ರಚನೆ: ಸಚಿವ ಸತೀಶ್ ಜಾರಕಿಹೊಳಿ

: ಮೈಕ್ರೋಪೈನಾಸ್ಸ್ ನಿಂದ ಸಾಲ ಪಡೆದು ಜಿಲ್ಲೆಯಲ್ಲಿ ಸುಮಾರು ಹದಿನೈದು ಸಾವಿರ ಜನ ಮಹಿಳೆಯರು ಮೋಸ ಹೋಗಿದ್ದು, ಈ ಕುರಿತು ಮೂವರು ಪೊಲೀಸ್ ಅಧಿಕಾರಿಗಳ ತಂಡ ರಚಿಸಿ, ತನಿಖೆಗೆ ಆದೇಶಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.

Home add -Advt

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಈ ಕುರಿತು ಮಾತನಾಡಿದ ಅವರು, ಮೈಕ್ರೋಪೈನಾಸ್ಸ್ ನಿಂದ ಸುಮಾರು ಹದಿನೈದು ಸಾವಿರ ಮಹಿಳೆಯರು ಲೀಗಲ್ ಆಗಿ
ಸಾಲ ಪಡೆದು, ಹೆಚ್ಚಿನ ಹಣ ಸಿಗುತ್ತದೆ ಎಂದು ಮೋಸಕ್ಕೆ ಒಳಗಾಗಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆಯರಿಂದ ಸುಮಾರು ನೂರು ಕೋಟಿ ಪಡೆದಿದ್ದಾರೆಂಬ ಮಾಹಿತಿ ಇದೆ. ಹೀಗಾಗಿ ಈಗಾಗಲೇ ಪೊಲೀಸ್ ಅಧಿಕಾರಿಗಳ ತಂಡ ತನಿಖೆಗೆ ಸೂಚಿಸಲಾಗಿದ್ದು, ಶೀಘ್ರವೇ ಸತ್ಯಾಸತ್ಯೆತೆ ತಿಳಿಯಲಿದೆ. ಮಹಿಳೆಯರಿಗೆ ಮೋಸ ಮಾಡಿದ ಮಧ್ಯವರ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಾರೆ. ಆದ್ದರಿಂದ ಮೈಕ್ರೋಪೈನಾಸ್ಸ್ ನಿಂದ ಮಹಿಳೆಯರಿಗೆ ಯಾವುದೇ ತರಹ ತೊಂದರೆ ಮಾಡಬಾರದು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

ಇನ್ನು ಗುತ್ತಿಗೆದಾರ ಆತ್ಮಹತ್ಯೆ ಕೆಸ್ ಬಗ್ಗೆ ಮಾತನಾಡಿದ ಅವರು, ಕೆ.ಎಸ್. ಈಶ್ವರಪ್ಪ ಅವರ ಕೇಸ್ ನಲ್ಲಿ ಸಂತೋಷ ಪಾಟೀಲ ಈಶ್ವರಪ್ಪನವರ ಹೆಸರು ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ, ಆದರೆ ಪ್ರಿಯಾಂಕಾ ಖರ್ಗೆ ಅವರ ಹೆಸರು ಎಲ್ಲಿಯೂ ಉಲ್ಲೇಖವಿಲ್ಲ. ಹೀಗಾಗಿ ಈ ಕುರಿತು ತನಿಖೆ ನಡೆಯಲಿ, ತನಿಖೆಯಿಂದ ಸತ್ಯಾಸತ್ಯೆತೆ ತಿಳಿಯುತ್ತೆ. ಇನ್ನು ಬಿಜೆಪಿಯವರು ಪ್ರತಿಭಟಿಸಿದರೆ, ಆಗ್ರಹಿಸಿದರೆ ರಾಜೀನಾಮೆ ನೀಡೊಕ್ಕೆ ಆಗಲ್ಲ ಎಂದರು.

ಬೆಳಗಾವಿಯ ಕಸ ವಿಲೇವಾರಿಗೆ ನಾಲ್ಕು ಘಟಕಗಳನ್ನು ಮಾಡಬೇಕೆಂದು ನಾನು ಮೊದಲೆ ಹೇಳಿದ್ದೆ, ಈ ಕುರಿತು ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಪರಿಹರಿಸಲಾಗುವುದು ಎಂದರು

ಈ ಸಂದರ್ಭದಲ್ಲಿ ಶಾಸಕ ಆಸೀಫ್ ( ರಾಜು) ಸೇಠ್ ಇದ್ದರು.

Related Articles

Back to top button