Latest

ಒಂದೇ ದಿನ 2.2 ಲಕ್ಷಕ್ಕೂ ಹೆಚ್ಚು ಜನರಿಗೆ‌ ಸೋಂಕು ಪತ್ತೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ವಿಶ್ವಾದ್ಯಂತ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ಒಂದೇ ದಿನ ವಿವಿಧ ರಾಷ್ಟ್ರಗಳಲ್ಲಿ ಸುಮಾರು​ 2.2 ಲಕ್ಷಕ್ಕೂ ಹೆಚ್ಚು ಜನರಿಗೆ‌ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆಯೂ 12.5 ಮಿಲಿಯನ್​​ನಷ್ಟು ಆಗಿದೆ.

ವಿಶ್ವದಾದ್ಯಂತ ಕಳೆದ 24 ಗಂಟೆಯಲ್ಲಿ 228,102 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಜಗತ್ತಿನ ವಿವಿಧ ದೇಶಗಳಲ್ಲಿ ಸೋಂಕಿತರ ಸಂಖ್ಯೆಯೂ 1 ಕೋಟಿ 25 ಲಕ್ಷ ದಾಟಿದೆ. ಇದುವರೆಗೂ ಕೊರೋನಾಗೆ ಕಳೆದ ಏಳು ತಿಂಗಳಿನಲ್ಲಿ 559,000 ಜನರ ಬಲಿಯಾಗಿದ್ದಾರೆ.

ಅಮೆರಿಕದಲ್ಲಿ ಕಳೆದ 24 ಗಂಟೆಯಲ್ಲಿ ಸುಮಾರು 69 ಸಾವಿರ ಮಂದಿಗೆ ಹೊಸದಾಗಿ ಕೊರೋನಾ ಬಂದಿದೆ. ಹಾಗೆಯೇ ಬ್ರೆಜಿಲ್​​ನಲ್ಲಿ ಶುಕ್ರವಾರ ಒಂದೇ ದಿನ 45,000 ಹೊಸ ಕೇಸ್​​, 1,200 ಮಂದಿ ಬಲಿಯಾಗಿರುವುದು ವರದಿಯಾಗಿದೆ. ಈ ಮೂಲಕ ಬ್ರೆಜಿಲ್​​​ ಒಂದರಲ್ಲೇ ಸೋಂಕಿತರ ಸಂಖ್ಯೆ 1.8 ಮಿಲಿಯನ್​ ಗೆ ಏರಿಕೆಯಾಗಿದೆ.

ಇನ್ನು, ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 26,506 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದ ಕೊರೋನಾ ಪೀಡಿತರ ಸಂಖ್ಯೆ 7,93,802ಕ್ಕೆ ಏರಿಕೆಯಾಗಿದೆ. ಹಾಗೆಯೇ ಒಂದೇ ದಿನ ಕೊರೋನಾಗೆ 475 ಮಂದಿ ಬಲಿಯಾಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button