ಪ್ರಗತಿವಾಹಿನಿ ಸುದ್ದಿ, ಲಂಡನ್ – ಲಂಡನ್ ನಲ್ಲಿರುವ ಭಾರತೀಯ ಮೂಲದ ವೈದ್ಯ, ರಾಜಕಾರಣಿ ಡಾ.ನೀರಜ್ ಪಾಟೀಲ ಅವರಿಗೆ ಕೊರೋನಾ ಸೋಂಕು ತಗುಲಿದೆ.
ಈ ಕುರಿತು ಅವರೇ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ತಾವು ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಇರುವುದರಿಂದ ಕೊರೋನಾ ತಗುಲಿದೆ ಎಂದೂ ಅವರು ಹೇಳಿಕೊಂಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿತ್ತು, ಕೌಗಳನ್ನು ಆಗಾಗ ತೊಳೆದುಕೊಳ್ಲಬೇಕಿತ್ತು, ಪರ್ಸನಲ್ ಪ್ರೊಟೆಕ್ಷನ್ ಕಿಟ್ ಧರಿಸಬೇಕಿತ್ತು ಎಂದು ಹೇಳಿದ್ದಾರೆ.
ಆದರೆ ನನ್ನ ದೇಹ ಅತ್ಯಂತ ಬಲಿಷ್ಟವಾಗಿದೆ. ಆದಷ್ಟು ಬೇಗ ಗುಣಮುಖನಾಗುತ್ತೇನೆ. ಸಧ್ಯ ನನ್ನನ್ನು ನಾನೇ ಐಸೋಲೇಟ್ ಮಾಡಿಕೊಂಡಿದ್ದೇನೆ. ಜಿಮ್ ಗಳಿಗೆ ಹೋಗುತ್ತಿದ್ದೇನೆ. ನನಗೆ ಸಿಗರೇಟಿ ಸೇವನೆ ಸೇರಿದಂತೆ ಯಾವುದೇ ದುಶ್ಚಟಗಳಿಲ್ಲ. ನಿರಂತರ ವ್ಯಾಯಾಮ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುತ್ತಿದ್ದೇನೆ ಎಂದು ನೀರಜ್ ಪಾಟೀಲ ಬರೆದುಕೊಂಡಿದ್ದಾರೆ.
ನೀರಜ್ ಪಾಟೀಲ ಕಳೆದ ಫೆ.29ರಂದು ಬೆಂಗಳೂರಿಗೆ ಆಗಮಿಸಿದ್ದರು. ಆಗ ಮುಖ್ಯಮಂತ್ರಿಗಳ ಕಚೇರಿ ಮತ್ತು ವಿಧಾನಸೌಧದಲ್ಲಿ ಸಹ ಕಾಣಿಸಿಕೊಂಡಿದ್ದರು.
ನೀರಜ್ ಪಾಟೀಲ ಲಂಡನ್ ನಲ್ಲಿ ಮೇಯರ್ ಕೂಡ ಆಗಿದ್ದವರು. ಭಾರತದ ರಾಜಕಾರಣಿಗಳು ಸೇರಿದಂತೆ ಹಲವಾರು ಗಣ್ಯರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ