
ಪ್ರಗತಿವಾಹಿನಿ ಸುದ್ದಿ, ಚೆನ್ನೈ – ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯ ಅವರಿಗೂ ಕೊರೋನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಮ್ಮ ಫೇಸ್ ಬುಕ್ ಪುಟದಲ್ಲಿ ಸೆಲ್ಫ್ ವೀಡಿಯೋ ಶೇರ್ ಮಾಡಿರುವ ಎಸ್ಪಿ, 2 -3 ದಿನದ ಹಿಂದೆ ಸ್ವಲ್ಪ ಅನಾರೋಗ್ಯವಾದಂತಾಗಿತ್ತು. ನೆಗಡಿ ಮತ್ತು ಸಣ್ಣ ಜ್ವರ ಕಾಣಿಸಿತ್ತು. ಹಾಗಾಗಿ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಂಡೆ. ಸಣ್ಣ ಪ್ರಮಾಣದ ಕೋವಿಡ್ ಲಕ್ಷಣ ಇರುವುದಾಗಿ ವೈದ್ಯರು ತಿಳಿಸಿದರು. ಹಾಗಾಗಿ ಮನೆಯಲ್ಲೇ ಸೆಲ್ಫ್ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ನನ್ನ ಆರೋಗ್ಯದ ಕುರಿತು ಯಾರೂ ಚಿಂತಿಸುವ ಅಗತ್ಯವಿಲ್ಲ. ಜ್ವರ ಮತ್ತು ನೆಗಡಿ ಹೊರತುಪಡಿಸಿ ನನಗೆ ಬೇರೇನೂ ತೊಂದರೆ ಇಲ್ಲ. ಎಲ್ಲರೂ ಎಚ್ಚರಿಕೆಯಿಂದಿರಬೇಕು ಎಂದು ಅವರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ