ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಇದು 397 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಒಟ್ಟೂ ಪ್ರಕರಣಗಳ ಸಂಖ್ಯೆ 10118 ಆಗಿದ್ದು, 3799 ಪ್ರಕರಣಗಳು ಸಕ್ರೀಯವಾಗಿವೆ.
ಇಂದು ಕಂಡುಬಂದ ಪ್ರಕರಣಗಳ ಪೈಕಿ 8 ಜನರು ಅಂತಾರಾಷ್ಟ್ರೀಯ ಪ್ರಯಾಣಿಕರು ಹಾಗೂ 75 ಜನರು ಅಂತಾರಾಜ್ಯ ಪ್ರಯಾಣಿಕರು.
ರಾಜ್ಯದಲ್ಲಿ ಒಟ್ಟೂ 22063 ಜನರು ಪ್ರಥಮ ಸಂಪರ್ಕ ಮತ್ತು 16846 ಜನರು ದ್ವಿತೀಯ ಸಂಪರ್ಕಕ್ಕಾಗಿ ನಿಗಾದಲ್ಲಿ ಇದ್ದಾರೆ.
ಇಂದು ಬೆಂಗಳೂರಿನಲ್ಲಿ 173, ಬಳ್ಳಾರಿಯಲ್ಲಿ 34, ಕಲಬುರಗಿ ಹಾಗೂ ರಾಮನಗರದಲ್ಲಿ ತಲಾ 22, ಉಡುಪಿ, 14, ಯಾದಗಿರಿ ಹಾಗೂ ಧಾರವಾಡದಲ್ಲಿ ತಲಾ 12 ಪ್ರಕರಣಗಳು ಪತ್ತೆಯಾಗಿವೆ. ಕೊಪ್ಪಳ 11, ರಾಯಚೂರು ಹಾಗೂ ಉತ್ತರ ಕನ್ನಡ ತಲಾ 9, ದಾವಣಗೆರೆ, ಚಿಕ್ಕಬಳ್ಳಾಪುರ ತಲಾ 8, ಮೈಸೂರು, ಬೆಂಗಳೂರು ಗ್ರಾಮಾಂತರ ತಲಾ 7, ಗದಗ, ಕೋಲಾರ ತಲಾ 6, ಬೀದರ್ 5, ವಿಜಯಪುರ 4, ಶಿವಮೊಗ್ಗ 3, ಮಂಡ್ಯ, ಚಿತ್ರದುರ್ಗ, ಚಾಮರಾಜನಗರ ಹಾಗೂ ಕೊಡಗುಗಳಲ್ಲಿ ತಲಾ 2, ಬೆಳಗಾವಿ, ಹಾಸನ, ತುಮಕೂರು ಹಾಗೂ ಚಿಕ್ಕಮಗಳೂರಿನಲ್ಲಿ ತಲಾ 1 ಪ್ರಕರಣ ಇಂದು ದೃಢಪಟ್ಟಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ