ಶಾಲೆ ಆರಂಭಕ್ಕೆ ದಿನಗಣನೆ: ರಜೆ ವಿಸ್ತರಿಸುವಂತೆ ಮತ್ತಷ್ಟು ಹೆಚ್ಚಿದ ಒತ್ತಡ; CMಗೆ ಪತ್ರ ಬರೆದ ಮೂವರು ಶಾಸಕರು; ಇಕ್ಕಟ್ಟಿನಲ್ಲಿ ಸರಕಾರ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಶಾಲೆಗಳ ಮಧ್ಯಂತರ (ದಸರಾ) ರಜೆಯನ್ನು ಅ. 31ರವರೆಗೆ ವಿಸ್ತರಿಸುವ ವಿಚಾರದಲ್ಲಿ ಸರಕಾರದ ಮೇಲಿನ ಒತ್ತಡ ದ್ವಿಗುಣಗೊಳ್ಳುತ್ತ ಸಾಗಿದೆ. ರಜೆ ವಿಸ್ತರಣೆಗೆ ಮಧ್ಯ ಪ್ರವೇಶಿಸುವಂತೆ ಮೂವರು ವಿಧಾನ ಪರಿಷತ್ ಸದಸ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಬಾಹ್ಯ ಒತ್ತಡಗಳಿಗಿಂತ ಸರಕಾರದ ಆಂತರಿಕ ಒತ್ತಡಗಳೇ ಹೆಚ್ಚಾಗಿರುವುದು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸರಕಾರದಲ್ಲಿರುವ ಸಚಿವರು, ಆಡಳಿತ ಪಕ್ಷದ ಶಾಸಕರು ಮತ್ತಿತರ ಜನಪ್ರತಿನಿಧಿಗಳೇ ಹೆಚ್ಚು ಒತ್ತಡ ಬೀರುತ್ತಿರುವುದರಿಂದ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ದ್ವಂದ್ವದಲ್ಲಿ ಸಿಲುಕುವಂತಾಗಿದೆ.
ವಿಧಾನ ಪರಿಷತ್ ಸದಸ್ಯjರಾದ ಬಸವರಾಜ ಹೊರಟ್ಟಿ, ಶಶಿಲ್ ನಮೋಶಿ, ಪುಟ್ಟಣ್ಣ ಮುಂತಾದವರು ಮಧ್ಯಂತರ ರಜೆ ಕಡಿತ ವೈಜ್ಞಾನಿಕ ಎಂದು ಬಗೆದಿದ್ದು ಈ ಕುರಿತು ಕ್ರಮಕ್ಕೆ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ವರ್ಷಗಟ್ಟಲೆ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದರಿಂದ ವಿದ್ಯಾರ್ಥಿಗಳ ಓದಿನ ಮೇಲೆ ವ್ಯತಿರಿಕ್ತ ಪರಿಣಾಮವಾಗಿತ್ತು. ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಸರಕಾರ ಬೇಸಿಗೆ ರಜೆಯ 15 ದಿನಗಳು ಹಾಗೂ ಮಧ್ಯಂತರ ರಜೆಯ 17 ದಿನಗಳು ಸೇರಿ ಒಟ್ಟು 32 ದಿನಗಳ ರಜೆ ಕಡಿತಗೊಳಿಸಿತ್ತು. ತನ್ಮೂಲಕ ಕಲಿಕಾ ಚೇತನ ಕಾರ್ಯಕ್ರಮದೊಂದಿಗೆ ಕೋವಿಡ್ ಕಾಲದಲ್ಲಾದ ಶೈಕ್ಷಣಿಕ ನಷ್ಟ ಭರಿಸಿಕೊಳ್ಳುವುದು ಸರಕಾರದ ಉದ್ದೇಶ.
ಆದರೆ ಇವೆಲ್ಲವೂ ವೈಜ್ಞಾನಿಕ ಹಿನ್ನೆಲೆಯಲ್ಲಿ ನೀಡುವ ರಜೆಗಳಾಗಿದ್ದು ಅವುಗಳ ಕಡಿತ ಮಕ್ಕಳಲ್ಲಿ ಹಾಗೂ ಬೋಧಕರಲ್ಲಿ ಒತ್ತಡ ಸೃಷ್ಟಿಸಿದೆ ಎಂಬುದು ವಿಧಾನ ಪರಿಷತ್ ಸದಸ್ಯರ ಅಭಿಪ್ರಾಯ.
ಸರಕಾರ ಶಾಲೆಗಳ ರಜಾ ದಿನಗಳನ್ನು ದಶಕದಿಂದಾಚೆಯೇ ಕಡಿತಗೊಳಿಸುತ್ತ ಬಂದಿದೆ. ಆದರೆ ಉಳಿದ ಇಲಾಖೆಗಳ ನೌಕರರು ಎರಡನೇ ಹಾಗೂ ನಾಲ್ಕನೇ ಶನಿವಾರದ ರಜೆಗಳನ್ನು ಪಡೆಯುತ್ತಿದ್ದರೂ ಅವರ ವಾರ್ಷಿಕ 30 ದಿನಗಳ ಗಳಿಕೆ ರಜೆಗಳ ಪ್ರಮಾಣ ಅಬಾಧಿತವಾಗಿದೆ. ಶಿಕ್ಷಕರಿಗೆ ಮಾತ್ರ ಸಿಗುತ್ತಿರುವುದು ಕೇವಲ 10 ದಿನಗಳ ಗಳಿಕೆ ರಜೆ. 2 ಮತ್ತು 4ನೇ ಶನಿವಾರವೂ ರಜೆ ಇಲ್ಲ. ಶಿಕ್ಷಕರ ಕೆಲಸದ ದಿನಗಳನ್ನು ಹೆಚ್ಚಿಸುತ್ತಿರುವುದಕ್ಕೆ ಪರ್ಯಾಯವಾಗಿ ಗಳಿಕೆ ರಜೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ ಎಂಬ ಅಸಮಾಧಾನಗಳು ಕೇಳಿಬಂದಿವೆ.
ನಿಗದಿಯಂತೆ ಶಾಲೆಗಳು ಆರಂಭವಾಗಲು ಇನ್ನು ಕೇವಲ 3 ದಿನ ಉಳಿದಿದೆ. ಸರಕಾರ ತುರ್ತಾಗಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾದ ಅನಿವಾರ್ಯತೆಯಲ್ಲಿದೆ. ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸುತ್ತಾರೋ ಕಾದು ನೋಡಬೇಕಿದೆ.
ಒಂದು ತಿಂಗಳು ಶಾಲೆಗಳ ದಸರಾ ರಜೆ : ವೈಜ್ಞಾನಿಕ ಕಾರಣಗಳೊಂದಿಗೆ ಪ್ರತಿಪಾದನೆ
https://pragati.taskdun.com/latest/one-month-dussehra-vacation-for-schools-a-proposition-with-scientific-reasons/
ಶಾಲೆಗಳ ದಸರಾ ರಜೆ ವಿಸ್ತರಣೆಗೆ ಶನಿವಾರ CM ಸಹಿ ಹಾಕ್ತಾರಾ?
https://pragati.taskdun.com/latest/cm-signs-extension-of-dussehra-holiday-for-schools-on-saturday/
ಶಾಲೆಗಳ ದಸರಾ ರಜೆ ಒಂದು ತಿಂಗಳಿಗೆ ವಿಸ್ತರಣೆಯಾಗುತ್ತಾ?ಟ
https://pragati.taskdun.com/latest/will-dussehra-vacation-of-schools-be-extended-to-one-month/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ