ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 545 ಪಿಎಸ್ ಐ ಹುದ್ದೆ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಹೆಚ್ ಎ ಎಲ್ ಸಂಚಾರಿ ಠಾಣೆ ಹೆಡ್ ಕಾನ್ಸ್ ಟೇಬಲ್ ಲಕ್ಕಪ್ಪ, ಶ್ರೀಮಂತ್, ಶ್ರೀಶೈಲ್ ಬಿರಾದಾರ್ ಬಂಧಿತ ಆರೋಪಿಗಳು. ಮೂವರೂ ಪಿಎಸ್ ಐ ಪರೀಕ್ಷೆಯಲ್ಲಿ ಬ್ಲುಟೂಥ್ ಬಳಸಿ ಅಕ್ರಮವೆಸಗಿದ್ದರು ಎನ್ನಲಾಗಿದೆ.
ಜೇವರ್ಗಿ ಮೂಲದ ಲಕ್ಕಪ್ಪ ಹೆಚ್ ಎ ಎಲ್ ಸಂಚಾರಿ ಠಾಣೆ ಹೆಡ್ ಕಾನ್ಸ್ ಟೇಬಲ್ ಆಗಿ ಕೆಲಸ ಮಾಡುತ್ತಿದ್ದು, ಪ್ರಮುಖ ಆರೋಪಿ ಆರ್.ಡಿ ಪಾಟೀಲ್ ಮೂಲಕ ಡೀಲ್ ಕುದುರಿಸಿ, ಇನ್ ಸರ್ವಿಸ್ ಖೋಟಾದಡಿ ಕಸ್ತೂರಿ ನಗರ ಬಳಿಯ ನ್ಯೂ ಹಾರಿಜನ್ ಕಾಲೇಜಿನಲ್ಲಿ ಬ್ಲುಟೂಥ್ ಬಳಸಿ ಅಕ್ರಮವಾಗಿ ಲಿಖಿತ ಪರೀಕ್ಷೆ ಬರೆದ್ದ ಎನ್ನಲಾಗಿದೆ.
ಪಿಎಸ್ ಐ ಆಯ್ಕೆ ಲಿಸ್ಟ್ ನಲ್ಲಿದ್ದ ಶ್ರೀಮಂತ್ ಹಾಗೂ ಶ್ರೀಶೈಲ್ ಬಿರಾದಾರ್ ಎಂಬ ಇಬ್ಬರನ್ನು ಧಾರವಾಡದಲ್ಲಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದು, ಮೂವರನ್ನು ವಿಚಾರಣೆಗಾಗಿ ಬೆಂಗಳೂರಿಗೆ ಕರೆ ತರಲಾಗಿದೆ.
ಪಿಎಸ್ ಐ ಅಕ್ರಮ ನೇಮಕಾತಿ ಹಗರಣದಲ್ಲಿ ಬಗೆದಷ್ಟು ಅಕ್ರಮಗಳು ಬಯಲಾಗುತ್ತಿದ್ದು, ತನಿಖೆ ಮುಂದುವರೆದಿದೆ.
ಮುರುಘಾಶ್ರೀಗಳಿಗೆ ಮತ್ತೊಂದು ಸಂಕಷ್ಟ
https://pragati.taskdun.com/latest/murughashreetwo-more-miner-girlssexualy-harrasment-case-filefir/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ