ಹೊರಟ್ಟಿಗೆ ರೈಟ್ ರೈಟ್ ಎಂದ ಮತದಾರರು; ಅವನ್ನೆಲ್ಲ ತಿರಸ್ಕರಿಸಿದ ಎಣಿಕೆ ಸಿಬ್ಬಂದಿ; ಇಳಕಲ್ ನಲ್ಲಿ ಸಿಕ್ತು 5 ಹೆಚ್ಚುವರಿ ಬ್ಯಾಲೆಟ್ ಪೇಪರ್
ಹೊರಟ್ಟಿ ಗೆಲುವು ಬಹುತೇಕ ಖಚಿತವಾಗಿದೆ. 7 ಸಾವಿರಕ್ಕೂ ಹೆಚ್ಚು ಮತ ಪಡೆದಿರುವ ಹೊರಟ್ಟಿ ಗೆಲುವಿನತ್ತ ಮುನ್ನಡೆದಿದ್ದಾರೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪಶ್ಚಿಮ ಶಿಕ್ಷಕರ ಕ್ಷೇತ್ರ, ವಾಯವ್ಯ ಶಿಕ್ಷಕರ ಕ್ಷೇತ್ರ ಮತ್ತು ವಾಯವ್ಯ ಪದವೀಧರ ಕ್ಷೇತ್ರಗಳ ಮತ ಎಣಿಕೆ ಬೆಳಗಾವಿಯ ಜ್ಯೋತಿ ಕಾಲೇಜಿನಲ್ಲಿ ನಡೆಯುತ್ತಿದೆ.
ಆರಂಭಿಕವಾಗಿ ಕೆಲವು ಗೊಂದಲಗಳು ಉಂಟಾದರೂ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಮತ್ತು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸ್ವತಃ ನಿಂತು ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ. ಗಲಾಟೆ ಮಾಡಿದರೆ ಮುಲಾಜಿಲ್ಲದೆ ಹೊರಗೆ ಹಾಕ್ತೀನಿ ಎಂದು ಎಚ್ಚರಿಸಿದರು.
ಮತಪೆಟ್ಟಿಗೆ ಬಣ್ಣ ಬದಲಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ ಪರ ಪರ ಏಜೆಂಟರು ಆಕ್ಷೇಪ ವ್ಯಕ್ತಪಡಿಸಿದರು. ಮತ ಪೆಟ್ಟಿಗೆ ಬದಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಈ ಬಗ್ಗೆ ಗೊಂದಲ ನಿವಾರಿಸುವ ಪ್ರಯತ್ನ ಮಾಡಿದರು.
ಪಾಸ್ ಇಲ್ಲದೆ ಮತ ಎಣಿಕೆ ಕೇಂದ್ರಕ್ಕೆ ಬಂದಿದ್ದ ನಿರಾಣಿ ಪಿಎಯನ್ನು ಜಿಲ್ಲಾ ಚುನಾವಣಾಧಿಕಾರಿ ನಿತೇಶ ಪಾಟೀಲ್ ಹೊರ ಹಾಕಿದರು. ಪಾಸ್ ಇಲ್ಲದೆ ಹೇಗೆ ಬಂದಿರಿ ಎಂದು ಡಿಸಿ ಪ್ರಶ್ನಿಸಿ , ಅವರನ್ನು ಮತ ಎಣಿಕೆ ಕೇಂದ್ರದಿಂದ ಹೊರಗೆ ಕಳುಹಿಸಿದರು.
ವಾಯವ್ಯ ಶಿಕ್ಷಕರ ಕ್ಷೇತ್ರದ ಇಳಕಲ್‌ನ ಮತಪೆಟ್ಟಿಗೆಯಲ್ಲಿ 5 ಹೆಚ್ಚುವರಿ ಮತಗಳು ಬಂದಿದ್ದಕ್ಕೆ ಪಕ್ಷೇತರ ಅಭ್ಯರ್ಥಿ ಎನ್.ಬಿ.ಬನ್ನೂರು ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಹಳಷ್ಟು ಮತದಾರರು ಬಸವರಾಜ ಹೊರಟ್ಟಿ ಹೆಸರಿನ ಮುಂದೆ ರೈಟ್ ಮಾರ್ಕ್ ಹಾಕಿದ್ದಾರೆ. ಪ್ರಾಶಸ್ತ್ಯದ ಮತ ಹಾಕಬೇಕಿದ್ದ ಜಾಗದಲ್ಲಿ ರೈಟ್ ಮಾರ್ಕ್ ಹಾಕಿದ್ದರಿಂದ ಅವೆಲ್ಲ ಮತಗಳು ತಿರಸ್ಕೃತವಾಗಿವೆ. ಆದಾಗ್ಯೂ ಹೊರಟ್ಟಿ ಗೆಲುವು ಬಹುತೇಕ ಖಚಿತವಾಗಿದೆ. 7 ಸಾವಿರಕ್ಕೂ ಹೆಚ್ಚು ಮತ ಪಡೆದಿರುವ ಹೊರಟ್ಟಿ ಗೆಲುವಿನತ್ತ ಮುನ್ನಡೆದಿದ್ದಾರೆ.
ಮತಗಳ ಎಣಿಕೆ ಮುಂದುವರಿದಿದ್ದು, ಪ್ರಾಶಸ್ತ್ಯದ ಮತಗಳಾಗಿದ್ದರಿಂದ ಫಲಿತಾಂಶ ವಿಳಂಬವಾಗಲಿದೆ.
ವಿಧಾನ ಪರಿಷತ್ ಚುನಾವಣೆ: ಮತ ಎಣಿಕೆ ಆರಂಭ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ