Latest

ಮೂವರ ಹತ್ಯೆ; 19 ವರ್ಷದ ಯುವಕನ ಬಂಧನ

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಯುವಕನೊಬ್ಬ, ಸುತ್ತಿಗೆಯಿಂದ ಹೊಡೆದು ಮೂವರನ್ನು ಹತ್ಯೆಗೈದ ಘಟನೆ ತೆಲಂಗಾಣದ ನಿಜಾಮಾಬಾದ್ ನಲ್ಲಿ ನಡೆದಿದೆ.

ಪ್ರಕರಣ ಸಂಬಂಧ 19 ವರ್ಷದ ಯುವಕ ಶ್ರೀಕಾಂತ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಕುಡಿದ ಅಮಲಿನಲ್ಲಿ ಹಣ ಕದಿಯುವ ಉದ್ದೇಶಕ್ಕೆ ವರ್ಕ್ ಶಾಪ್ ಗೆ ಹೋಗಿದ್ದಾಗ ಅಲ್ಲಿ ಮೂವರು ಮಲಗಿದ್ದರು. ಮೂವರ ತಲೆಗೂ ಸುತ್ತಿಗೆಯಿಂದ ಹೊಡೆದು ಕೊಂದು ಮೊಬೈಲ್ ಹಾಗೂ ಹಣದೊಂದಿಗೆ ಆರೋಪಿ ಪರಾರಿಯಾಗಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ನಿಜಾಮಾಬಾದ್ ಪೊಲೀಸ್ ಅಧಿಕಾರಿ ಕಾರ್ತಿಕೇಯ ತಿಳಿಸಿದ್ದಾರೆ.

ಮೃತರನ್ನು ಕೊಯ್ಲು ಯಂತ್ರದ ಮೆಕಾನಿಕ್ ಹರ್ಪಾಲ್ ಸಿಂಗ್, ಜೋಗಿಂದರ್ ಸಿಂಗ್ ಮತ್ತು ಕ್ರೇನ್ ಆಪರೇಟರ್ ಬಾನೋತ್ ಸುನೀಲ್ ಎಂದು ಗುರುತಿಸಲಾಗಿದೆ.
ಒಮಿಕ್ರಾನ್ ಸೋಂಕಿಗೆ ಮೊದಲ ಬಲಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button