ಕಪಲ್ ಚಾಲೇಂಜ್: ಎಚ್ಚರಿಕೆ ನೀಡಿದ ಪೊಲೀಸರು

ಪ್ರಗತಿವಾಹಿನಿ ಸುದ್ದಿ, ಪುಣೆ – ಫೇಸ್ ಬುಕ್ ನಲ್ಲಿ ಭಾರಿ ಟ್ರೆಂಡ್ ಆಗಿರುವ ಕಪಲ್ ಚಾಲೇಂಜ್ ಅಕ್ಸೆಪ್ಟ್ ಮಾಡುವ ಮುನ್ನ ಎಚ್ಚರಿಕೆ ವಹಿಸಿ ಎಂದು ಪುಣೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Laxmi Hebbalkar Facebook idಸೈಬರ್ ಕ್ರೈಂ ಪೊಲೀಸರು ಈ ಸಂಬಂಧ ಟ್ವಿಟರ್ ಮೂಲಕ ಸಂದೇಶ ರವಾನಿಸಿದ್ದಾರೆ. ಕಪಲ್ ಚಾಲೇಂಜ್ ನಲ್ಲಿ ಹಾಕುವ ಫೋಟೋಗಳು ದುರುಪಯೋಗವಾಗುವ ಸಾಧ್ಯತೆ ಇದೆ. ಹಾಗಾಗಿ ಎಚ್ಚರಿಕೆ ವಹಿಸಿ ಎಂದಿದ್ದಾರೆ.

ಈ ಸಂಬಂಧ ಈಗಾಗಲೆ ಪೊಲೀಸರಲ್ಲಿ ಹಲವರು ದೂರು ದಾಖಲಿಸಿದ್ದಾರೆ. ತಮ್ಮ ಪೋಟೋಗಳು ದುರುಪಯೋಗವಾಗಿವೆ ಎಂದು ದೂರಿದ್ದಾರೆ. ಹಾಗಾಗಿ ಯಾವುದೇ ರೀತಿಯ ಅನುಮಾನ ಬಂದಲ್ಲಿ ಕೂಡಲೇ ಸಂಪರ್ಕಿಸಿ ಎಂದಿದ್ದಾರೆ.

ಈಗಾಗಲೆ ಲಕ್ಷಾಂತರ ಜನರು ಕಪಲ್ ಚಾಲೇಂಜ್ ನಲ್ಲಿ ಭಾಗವಹಿಸಿ ಫಓಟೋಗಳನ್ನು ಹಾಕಿದ್ದಾರೆ. ನಿತ್ಯವೂ ಸಾವಿರಾರು ಜನರು ಅದರಲ್ಲಿ ಸೇರುತ್ತಲೇ ಇದ್ದಾರೆ. ಅದಕ್ಕೆ ವೈವಿದ್ಯಮಯ ಕಮೆಂಟ್ ಗಳೂ ಬರುತ್ತಿವೆ.

ಕಂಡವರ ಹೆಂಡತಿಯರನ್ನು ನೋಡಿ ಮಜಾ ತೆಗೆದುಕೊಳ್ಳಲು ಕಪಲ್ ಚಾಲೇಂಜ್ ಐಡಿಯಾ ಮಾಡಿದ್ದೀರಾ ಎಂದೂ ಕೆಲವರು ಕಮೆಂಟ್ ಮಾಡಿದ್ದಾರೆ.

ಒಟ್ಟಾರೆ, ಯಾವ್ಯಾವುದೋ ಚಾಲೇಂಜ್ ಬರುತ್ತದೆ ಎಂದು ಅಕ್ಸೆಪ್ಟ್ ಮಾಡುವ ಮುನ್ನ ಹಿಂದೆ ಮುಂದೆ ವಿಚಾರಿಸುವುದು ಒಳಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button