ಪ್ರಗತಿವಾಹಿನಿ ಸುದ್ದಿ; ಬ್ರೆಜಿಲ್: ಗರ್ಭದಲ್ಲಿರುವ ಮಗುವಿನ ಲಿಂಗ ಪತ್ತೆಯಾದ ಬಳಿಕ ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಸುವ ಜಂಡರ್ ರಿವೀಲ್ ಪಾರ್ಟಿಯನ್ನು ವಿಶಿಷ್ಟವಾಗಿ ಆಚರಿಸಲು ಹೋಗಿ ಬ್ರೆಜಿಲ್ ನ ದಂಪತಿ ಯಡವಟ್ಟು ಮಾಡಿದ್ದಾರೆ. ಬರ ಪೀಡಿತ ಪ್ರದೇಶಕ್ಕೆ ನೀರು ಪೂರೈಸು ಜಲಪಾತವನ್ನೇ ರಾಸಾಯನಿಕ ಬಳಸಿ ನೀಲಿ ಮಾಡಿದ್ದು, ಬ್ರೆಜಿಲ್ ಪರಿಸರ ಇಲಾಖೆ ಈ ಪ್ರಕರಣದ ಕೂಲಂಕುಷ ತನಿಖೆ ನಡೆಸುತ್ತಿದೆ.
ಗರ್ಭಾವಸ್ತೆಯಲ್ಲಿರುವ ಮಗು ಹೆಣ್ಣೋ ಅಥವಾ ಗಂಡೊ ಎಂಬುದು ಪತ್ತೆಯಾದ ಬಳಿಕ ಅಮೇರಿಕಾ ಸೇರಿದಂತೆ ಬಹುತೇಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಜಂಡರ್ ರಿವೀಲ್ ಪಾರ್ಟಿ ನಡೆಸುವ ಸಂಪ್ರದಾಯ ಬೆಳೆದು ಬಂದಿದೆ. ಗಂಡಾದರೆ ನೀಲಿ ಮತ್ತು ಹೆಣ್ಣಾದರೆ ಗುಲಾಬಿ ಬಣ್ಣದಿಂದ ಅಲಂಕಾರ ಮಾಡಿ ಸಂಭ್ರಮಿಸಲಾಗುತ್ತದೆ.
ಆದರೆ ಬ್ರೆಜಿಲ್ ನ ದಂಪತಿಗೆ ಗಂಡು ಮಗು ಹುಟ್ಟುವುದು ಖಚಿತವಾದ ಬಳಿಕ ಕ್ಯುಮಾ ಪೆ ಎಂಬ ಜಲಪಾತದ ನೀರನ್ನೇ ನೀಲಿ ಬಣ್ಣಕ್ಕೆ ತಿರುಗಿಸಿದ್ದಾರೆ. ಈ ಜಲಪಾತವು , ಸಮೀಪದ ತಂಗಾರಾ ಡಾ ಸೆರ್ರಾ ಎಂಬ ಊರಿಗೆ ನೀರು ಪೂರೈಸುತ್ತದೆ. ಈ ತಂಗಾರಾ ಡಾ ಸೆರ್ರಾ ಊರು ಕಳೆದ ಹಲವಾರು ವರ್ಷಗಳಿಂದ ಬರಗಾಲದಿಂದ ನರಳುತ್ತಿತ್ತು ಎಂಬುದು ಗಮನಾರ್ಹ. ಇಂಥ ಬರಗಾಲ ಪೀಡಿತ ಊರಿಗೆ ಪೂರೈಸುವ ನೀರಿನ ಮೂಲವನ್ನೇ ಕಲುಷಿತ ಮಾಡಿದ ದಂಪತಿಯ ವಿರುದ್ಧ ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
https://pragati.taskdun.com/latest/karavebelagaviprotestmes-ban/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ