
ಪ್ರಗತಿವಾಹಿನಿ ಸುದ್ದಿ: ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ ನಾಲ್ಕು ಜೋಡಿಗಳು ಲೋಕ ಅದಾಲತ್ ಮೂಲಕ ಮತ್ತೆ ಒಟ್ಟಿಗೆ ಸಂಸಾರ ನಡೆಸಲು ಒಪ್ಪಿದ್ದಾರೆ. ಹಾಸನದಲ್ಲಿ ಮೂವರು ಹಾಗೂ ಗಂಗಾವತಿಯಲ್ಲಿ ಒಂದು ಜೋಡಿ ವಿರಸದಿಂದ ಹೊರಬಂದು ಒಂದಾಗಿದ್ದಾರೆ.
ವಿಚ್ಛೇದನಕ್ಕೆ ಮುಂದಾಗಿದ್ದ ಮೂರು ಜೋಡಿಗಳು ಶನಿವಾರ ಹಾಸನದಲ್ಲಿ ನಡೆದ ಲೋಕ್ ಅದಾಲತ್ನಲ್ಲಿ ರಾಜಿ ಸಂಧಾನದ ಮೂಲಕ ಮತ್ತೆ ಒಂದಾಗಿದ್ದಾರೆ.
ರಾಜಿ ಸಂಧಾನಕ್ಕೆ ಒಪ್ಪಿದ ಮೂರು ಜೋಡಿಗಳು ತಾವು ಸಲ್ಲಿಸಿದ್ದ ವಿಚ್ಛೇದನ ಪ್ರಕರಣವನ್ನು ವಾಪಸ್ ಪಡೆದು ಮತ್ತೆ ಸಂಸಾರಕ್ಕೆ ಮರಳಿದ್ದಾರೆ.
ಇದು ಖುಷಿಯ ವಿಚಾರವಾಗಿದ್ದು, ಅವರಿಗೆ ನ್ಯಾಯಾಲಯದಲ್ಲಿಯೇ ಹಾರ ಬದಲಾಯಿಸಿಕೊಳ್ಳುವ ಮೂಲಕ ಹೊಸ ಜೀವನಕ್ಕೆ ನ್ಯಾಯಾಧೀಶರು, ವಕೀಲರು ಮತ್ತು ಸಾಕ್ಷಿದಾರರು ಶುಭ ಕೋರಿದರು.
ಸಂಸಾರದಲ್ಲಿನ ವಿರಸದಿಂದಾಗಿ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದ ಜೋಡಿಯೊಂದು ಶನಿವಾರ ಇಲ್ಲಿನ ನ್ಯಾಯಾಲಯಗಳ ಆವರಣದಲ್ಲಿ ನಡೆದ ಲೋಕ ಅದಾಲತ್ನಲ್ಲಿ ನ್ಯಾಯಾಧೀಶರು, ವಕೀಲರ ಸಮಕ್ಷಮದಲ್ಲಿ ಮತ್ತೆ ಒಂದಾದರು.
ಗಂಗಾವತಿ ತಾಲೂಕು ಕಾನೂನು ಸೇವಾ ಸಮಿತಿಯ ಆಶ್ರಯದಲ್ಲಿ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ, ಗುಡಪ್ಪ ಬಸವಣ್ಣೆಪ್ಪ ಹಳ್ಳಾಕಾಯಿ, ನಾಗೇಶ ಪಾಟೀಲ, ಮೇಘಾ ಸೋಮಣ್ಣನವರ ನೇತೃತ್ವದಲ್ಲಿ ಲೋಕ ಅದಾಲತ್ ನಡೆಯಿತು. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ, ಹಿರಿಯ ಸಿವಿಲ್, ಪ್ರಧಾನ ಸಿವಿಲ್ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು 10,144 ಪ್ರಕರಣ ಬಾಕಿಯಿದ್ದು, ಈ ಪೈಕಿ ಶನಿವಾರ ನಡೆದ ಅದಾಲತ್ನಲ್ಲಿ 2510 ಪ್ರಕಣಗಳನ್ನು ರಾಜಿ ಸಂಧಾನಕ್ಕೆ ಆಹ್ವಾನಿಸಲಾಗಿತ್ತು.
ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಕಾರಟಗಿ ಪಟ್ಟಣದ ದಂಪತಿ ನ್ಯಾಯಾಧೀಶರು, ವಕೀಲರು ಮತ್ತು ಕಕ್ಷಿದಾರರ ಸಮ್ಮುಖದಲ್ಲಿ ಮತ್ತೆ ಹಾರ ಬದಲಿಸಿಕೊಂಡು ಒಂದಾದರು.