ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣ ಯೋಜನೆಗೆ ಖಾಸಗಿ ಜಮೀನು ಪಡೆದಿದ್ದ ಸರಕಾರ ಜಮೀನಿನ ಮಾಲೀಕರಿಗೆ ಸೂಕ್ತ ಪರಿಹಾರ ನೀಡದ ಕಾರಣ ನ್ಯಾಯಾಲಯವು ಚಿಕ್ಕೋಡಿ ಸಹಾಯಕ ಆಯುಕ್ತರ ವಾಹನ ಹಾಗೂ ಎಸಿ ಕಚೇರಿಯ ವಸ್ತುಗಳನ್ನು ಸೀಜ್ ಮಾಡಲು ಆದೇಶ ನೀಡಿದೆ.
ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಸಿಬ್ಬಂದಿ ಎಸಿ ಕಚೇರಿ ವಾಹನ ಮತ್ತು ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ. ಮಾಂಗೂರು ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆಯು ಬುದ್ದಿರಾಜ ಪಾಟೀಲ್ ಎಂಬುವವರ 31 ಗುಂಟೆ ಜಮೀನು ಪಡೆದಿತ್ತು.
ಆದರೆ ಪರಿಹಾರ ನೀಡದ ಕಾರಣ ಬುದ್ದಿರಾಜ ಅವರು ಕೋರ್ಟ ಮೊರೆ ಹೋಗಿದ್ದರು. 2021ರಲ್ಲಿ ಬುದ್ದಿರಾಜ್ ಗೆ 11, 70,757 ರೂ. ಪರಿಹಾರ ನೀಡುವಂತೆ ಚಿಕ್ಕೋಡಿ ನ್ಯಾಯಾಲಯ ಆದೇಶ ಮಾಡಿತ್ತು. ಆದೇಶವಾಗಿ ವರ್ಷ ಕಳೆದರೂ ಪರಿಹಾರ ನೀಡದೇ ಇರುವ ಕಾರಣ, ಎಸಿ ಕಚೇರಿ ಸಾಮಗ್ರಿಗಳು, ವಾಹನ ಅಲ್ಲದೇ, ಲೋಕೋಪಯೋಗಿ ಇಲಾಖೆಯ ವಾಹನ ಕೂಡ ಸೀಜ್ ಮಾಡಲು ನ್ಯಾಯಾಲಯ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಸೀಜ್ ಮಾಡಲಾಗಿದೆ.
ವೋಟರ್ ಐಡಿ ಅಕ್ರಮ; ಸಮಗ್ರ ತನಿಖೆಗೆ ಆದೇಶ
https://pragati.taskdun.com/cm-basavaraj-bommaireactionvoter-id-misuse-case/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ