ಪ್ರಗತಿವಾಹಿನಿ ಸುದ್ದಿ; ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ನಿರ್ಮಾಣವಾಗಿರುವ ಗುಂಬಜ್ ಮಾದರಿಯ ಬಸ್ ಶೆಲ್ಟರ್ ಈಗ ಬಿಜೆಪಿ ನಾಯಕರಲ್ಲಿಯೇ ವಾಕ್ಸಮರಕ್ಕೆ ಕಾರಣವಾಗಿದೆ. ಗುಂಬಜ್ ವಿಚಾರ ಮುಂದಿಟ್ಟು ನನ್ನನ್ನೇ ಪಕ್ಷದಿಂದ ಬಿಡಿಸಬೇಕು ಎಂದು ಕೆಲವರು ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಬೇಸತ್ತಿದ್ದೇನೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿಕೆ ನೀಡಿದ್ದು, ಇದಕ್ಕೆ ಸಂಸದ ಪ್ರತಾಪ್ ಸಿಂಹ ಶಾಸಕರ ವಿರುದ್ಧವೇ ಮತ್ತೆ ಕಿಡಿಕಾರಿದ್ದಾರೆ.
ರಾಮದಾಸ್ ಈ ಹಿಂದೆ ಕಾಂಗ್ರೆಸ್ ನಲ್ಲಿದ್ದವರು. ಈಗ ಸ್ವತ: ಪ್ರಧಾನಿ ಮೋದಿಯವರಿಂದ ಎಸ್.ಎ.ರಾಮದಾಸ್ ಬೆನ್ನು ತಟ್ಟಿಸಿಕೊಂಡಿದ್ದಾರೆ. ಹೀಗಿರುವಾಗ ರಾಮದಾಸ್ ಅವರಿಗೆ ಕಿರುಕುಳ ನೀಡುವಷ್ಟು ಶಕ್ತಿವಂತ ನಾನಲ್ಲ ಎಂದು ಟಾಂಗ್ ನೀಡಿದ್ದಾರೆ.
ಗುಂಬಜ್ ಒಡೆದರೆ ಟಿಪ್ಪು ಅನುಯಾಯಿಗಳಿಗೆ ಕಿರುಕುಳ ಆಗುತ್ತದೆ. ಶಿವಾಜಿ ಅನುಯಾಯಿಗಳಿಗೆ ಕಿರುಕುಳ ಅನಿಸುವುದಿಲ್ಲ. ಹಾಗಾಗಿ ಶಾಸಕರು ಯಾವ ಅರ್ಥದಲ್ಲಿ ಹೇಳಿದ್ದಾರೆ ನನಗೆ ಗೊತ್ತಿಲ್ಲ ಎಂದರು.
ನಾನು ಮೈಸೂರಿನಲ್ಲಿ ಅಭಿವೃದ್ಧಿ ಮಾಡಲು ಬಂದಿದ್ದೇನೆ ಹೊರತು ರಿಯಲ್ ಎಸ್ಟೇಟ್ ಮಾಡಲು ಹೊಂದಾಣಿಕೆ ರಾಜಕಾರಣ ಮಾಡಲು ಬಂದಿಲ್ಲ. ಇವರ ಜೊತೆ ವ್ಯವಹಾರ ಮಾಡಬೇಕಾದ ಅಗತ್ಯವೂ ನನಗಿಲ್ಲ. ಮೈಸೂರು ರಾಜಕಾರಣಿಗಳ ಬಳಿ ನನ್ನನ್ನೇ ಸುಟ್ಟು ಹಾಕುವಷ್ಟು ಹಣವಿದೆ. ಅವರಿಗೆ ಕಿರುಕುಳನೀಡುವಷ್ಟು ಶಕ್ತಿವಂತ ನಾನಲ್ಲ ಎಂದು ತಿರುಗೇಟು ನೀಡಿದ್ದಾರೆ.
ರಾತ್ರೋ ರಾತ್ರಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ರಾತ್ರಿ ಕೆಲಸ ಮಾಡುವವರು ಕಳ್ಳರು. ರಾತ್ರಿ ಯಾಕೆ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು? ಬಸ್ ನಿಲ್ದಾಣಕ್ಕೆ ಹೆಸರಿಡಲು ಕಾನೂನಿದೆ.ಇಲ್ಲಿ ಕಾನೂನು ಉಲ್ಲಂಘನೆಯಾಗಿದೆ.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಧ್ಯಪ್ರವೇಶ ಮಾಡಿದೆ. ಅನಧಿಕೃತ ಕಟ್ಟಡ ಎಂದೂ ಹೇಳಿದೆ. ಮುಂದೇನು ಮಾಡುತ್ತಾರೆ ನೋಡೋಣ. ಈ ಬಸ್ ನಿಲ್ದಾಣದ ಮೂಲ ವಿನ್ಯಾಸದಲ್ಲಿ ಗುಂಬಜ್ ಇಲ್ಲ. ಹೊಸ ವಿನ್ಯಾಸದಲ್ಲಿ ಗುಂಬಜ್ ಇದೆ. ಆ ನಕ್ಷೆಯಲ್ಲಿ ಶಾಸಕರ ಆಪ್ತ ಕಾರ್ಯದರ್ಶಿ ಸಹಿ ಮಾಡಿದ್ದಾರೆ. ಅನಧಿಕೃತ ಕಟ್ಟಡ ಅಂದಮೇಲೆ ತ್ರವು ಮಾಡಬೇಕು ಎಂದು ವಾಗ್ದಾಳಿ ನಡೆಸಿದರು..
ಗುಂಬಜ್ ವಿಚಾರದಲ್ಲಿ ನನ್ನ ಮಾತಿಗೆ ನಾನು ಈಗಲೂ ಬದ್ಧ. ಈವರೆಗೂ ನಾನು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದ್ದೇನೆ. ಟಿಪ್ಪು ಎಕ್ಸ್ ಪ್ರೆಸ್ ರೈಲು ವಿಚಾರದಲ್ಲಿಯೂ ಹೆಸರು ಬದಲಾಯಿಸಿದ್ದೇನೆ. ಮಹಿಷ ದಸರಾ ನಿಲ್ಲಿಸಿದ್ದೇನೆ. ಗುಂಬಜ್ ವಿಚಾರದಲ್ಲಿಯೂ ನಾನು ನನ್ನ ಮಾತಿಗೆ ಬದ್ಧನಾಗಿ ನಡೆದುಕೊಳ್ಳುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ರಾಜಿಯ ಮಾತಿಲ್ಲ. ಅನಧಿಕೃತವಾಗಿ ನಿರ್ಮಿಸಿರುವುದು ಸೂಕ್ತವಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೊಟ್ಟ ಗಡುವು ಮುಗಿದ ಬಳಿಕ ಏನು ಮಾಡುತ್ತಾರೆ ನೋಡೋಣ ಎಂದು ಹೇಳಿದರು.
ಬೆಳಗಾಗುವಷ್ಟರಲ್ಲಿ ಕೆಂಪು ಬಣ್ಣದಲ್ಲಿ ಬದಲಾದ ಗುಂಬಜ್ ಮಾದರಿಯ ಬಸ್ ನಿಲ್ದಾಣ; ದಿನಕ್ಕೊಂದು ಸ್ವರೂಪದಲ್ಲಿ ತಂಗುದಾಣ
https://pragati.taskdun.com/mysioregumbaz-stale-buistandred-colore/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ