Latest

ಕೊರೊನಾ 3ನೇ ಅಲೆ ಖಚಿತ; ಏಮ್ಸ್ ಮುಖ್ಯಸ್ಥರ ಎಚ್ಚರಿಕೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶದಲ್ಲಿ ಕೊರೊನಾ ಮೂರನೇ ಅಲೆ ಅಪ್ಪಳಿಸುವುದು ಖಚಿತವಾಗಿದ್ದು, ಕೇವಲ 6-8 ವಾರಗಳಲ್ಲಿ ಮಹಾಮಾರಿ ಅಟ್ಟಹಾಸ ಆರಂಭವಾಗಲಿದೆ ಎಂದು ಏಮ್ಸ್ ಮುಖ್ಯಸ್ಥ ಡಾ.ರಣದೀಪ್ ಗುಲೇರಿಯಾ ತಿಳಿಸಿದ್ದಾರೆ.

ದೇಶದಲ್ಲಿ ಕೊರೊನಾ ಮೂರನೆ ಅಲೆ ತಪ್ಪಿಸಲು ಸಾಧ್ಯವಿಲ್ಲ ಇನ್ನು 3 ತಿಂಗಳಲ್ಲಿ ಕೋವಿಡ್ ಮೂರನೇ ಅಲೆ ಆರಂಭವಾಗಲಿದೆ. ಇನ್ನಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕಿರುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.

Home add -Advt

ದೇಶಾದ್ಯಂತ ಅನ್ ಲಾಕ್ ಆರಂಭವಾಗುತ್ತಿದ್ದಂತೆಯೇ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗುತ್ತಿದೆ. ಜನರ ಓಡಾಟ ಸಹಜವಾಗಿ ಹೆಚ್ಚುತ್ತಿದೆ. ಕೊರೊನಾ ಮೊದಲ ಹಾಗೂ ಎರಡನೇ ಅಲೆಯಿಂದ ಯಾರೂ ಕೂಡ ಪಾಠ ಕಲಿತಂತೆ ಕಾಣುತ್ತಿಲ್ಲ. ಕೊರೊನಾ ವೈರಸ್ ರೂಪಾಂತರ ಇನ್ನೂ ಕೂಡ ಮುಂದುವರೆದಿದೆ. ರಾಷ್ಟ್ರೀಯ ಮಟ್ಟದಲ್ಲಿ ಕೊರೊನಾ ಮೂರನೆ ಅಲೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಆದರೆ ಮೂರನೇ ಅಲೆ ಅಪ್ಪಳಿಸುವುದು ಖಚಿತ. ಮುಂದಿನ ಆರರಿಂದ ಎಂಟು ವಾರಗಳಲ್ಲಿ ದೇಶದಲ್ಲಿ ಮೂರನೇ ಅಲೆ ಆರಂಭವಾಗಲಿದೆ. ಕೋವುಡ್ ಪಾಸಿಟಿವಿಟಿ ಹೆಚ್ಚಿರುವ ಪ್ರದೇಶಗಳಲ್ಲಿ ಲಾಕ್ ಡೌನ್ ಮುಂದುವರೆಸುವ ಅಗತ್ಯವಿದೆ. ಕೊರೊನಾ ಮೊದಲ ಅಲೆಯಲ್ಲಿ ವೇಗವಾಗಿ ವೈರಸ್ ಹರಡಿಲ್ಲ ಆದರೆ ಎರಡನೇ ಅಲೆಯಲ್ಲಿ ಅತಿ ವೇಗವಾಗಿ ವೈರಸ್ ಹರಡಲು ಕಾರಣವಾಯಿತು. ಹೀಗಿರುವಾಗ ಮೂರನೆ ಅಲೆಯಲ್ಲಿ ಯಾವ ರೀತಿಯಲ್ಲಿ ವೈರಸ್ ಹರಡಲಿದೆ ಎಂಬ ಬಗ್ಗೆ ಇನ್ನಷ್ಟು ಅದ್ಯಯನಗಳು ನಡೆಯಬೇಕಿದೆ. ಜನರು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕಿದೆ ಎಂದು ಸೂಚಿಸಿದ್ದಾರೆ.
ಸಿಎಂ ನಾನು ಇಟ್ಟಂಥ ಹೆಜ್ಜೆಯನ್ನೇ ಇಡಲಿ; ಹೆಚ್ ಡಿಕೆ

Related Articles

Back to top button